Blog

ತಾಲೂಕು ಮಟ್ಟದ ಟೇಬಲ್ ಟೆನ್ನಿಸ್‌ನಲ್ಲಿ ಎಕ್ಸಲೆಂಟ್ ಕಾಲೇಜಿಗೆ ಪ್ರಥಮ ಸ್ಥಾನ

ಮೂಡುಬಿದಿರೆ : ಆಲ್ಫುರ್ಕಾನ್ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಸೆ.17ರಂದು ನಡೆದ ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಮೂಡುಬಿದಿರೆಯ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದೆ.

ಪಂದ್ಯಾವಳಿಯಲ್ಲಿ ಅತ್ಯುತ್ತಮ ಕ್ರೀಡಾಸ್ಫೂರ್ತಿ, ಸಂಘಟಿತ ಆಟ ಹಾಗೂ ಆತ್ಮವಿಶ್ವಾಸದ ಪ್ರದರ್ಶನ ನೀಡಿದ ಎಕ್ಸಲೆಂಟ್ ಕಾಲೇಜಿನ ತಂಡವು ಎದುರಾಳಿ ತಂಡಗಳನ್ನು ಮಣಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಈ ಮೂಲಕ ತಂಡವು ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಗೆ ಆಯ್ಕೆಯಾಗಿದ್ದು, ಮುಂದಿನ ಹಂತದಲ್ಲಿ ತಾಲೂಕನ್ನು ಪ್ರತಿನಿಧಿಸಲಿದೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಕ್ರೀಡಾ ವಿಭಾಗದವರು ಅಭಿನಂದನೆ ಸಲ್ಲಿಸಿದ್ದು, ಜಿಲ್ಲಾ ಮಟ್ಟದಲ್ಲಿಯೂ ಉತ್ತಮ ಪ್ರದರ್ಶನ ನೀಡುವಂತೆ ಶುಭ ಹಾರೈಸಿದ್ದಾರೆ.

Related posts

ಪ್ರಶಾಂತ್ ಶೆಟ್ಟಿಯವರಿಗೆ ರಂಗ ಚಾಣಕ್ಯ ಬಿರುದು

Madhyama Bimba

ಚತುಶ್ಪಥ ಕಾಮಗಾರಿ ಅವೈಜ್ಞಾನಿಕ

Madhyama Bimba

ಫೇಸ್ಬುಕ್ ಕಿರಿಕ್ – ಓರ್ವ ಬಂಧನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More