ಮೂಡುಬಿದಿರೆ

ವಿಟಿಯು ರ‍್ಯಾಂಕ್ ಪಟ್ಟಿಯಲ್ಲಿ ಆಳ್ವಾಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 9 ರ‍್ಯಾಂಕ್

ಮೂಡುಬಿದಿರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) 2025–26ನೇ ಶೈಕ್ಷಣಿಕ ಸಾಲಿನ ವಿವಿಧ ಎಂಜಿನಿಯರಿಂಗ್ ವಿಭಾಗಗಳ ರ‍್ಯಾಂಕ್ ಪಟ್ಟಿಯಲ್ಲಿ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ (ಎಐಇಟಿ) ವಿದ್ಯಾರ್ಥಿಗಳು ಒಟ್ಟು 9 ರ‍್ಯಾಂಕ್‌ಗಳನ್ನು ಗಳಿಸಿ ಗಮನಾರ್ಹ ಸಾಧನೆ ಮೆರೆದಿದ್ದಾರೆ.

ಕೃಷಿ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರಜ್ಞಾಶ್ರೀ 2ನೇ ರ‍್ಯಾಂಕ್, ಪ್ರಾಪ್ತಿ ಎನ್.ಎಸ್. 4ನೇ ರ‍್ಯಾಂಕ್, ತೇಜಸ್ ಎ.ವಿ. 5ನೇ ರ‍್ಯಾಂಕ್ ಹಾಗೂ ನಿಹಾರ್ ಎಸ್. ಆಚಾರ್ಯ 7ನೇ ರ‍್ಯಾಂಕ್ ಗಳಿಸಿದ್ದಾರೆ.
ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ (ಐಒಟಿ) ವಿಭಾಗದಲ್ಲಿ ಪ್ರಜ್ವಲ್ ಎಸ್.ಬಿ. 6ನೇ ರ‍್ಯಾಂಕ್ ಪಡೆದಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ ವಿಭಾಗದಲ್ಲಿ ಮಧು ಮಹಾಂತೇಶ್ ಅವ್ವಕ್ಕನವರ್ 8ನೇ ರ‍್ಯಾಂಕ್ ಹಾಗೂ ಸಹನಾ ಬಸವರಾಜ ಅಸುಂಡಿ 10ನೇ ರ‍್ಯಾಂಕ್ ಗಳಿಸಿದ್ದಾರೆ.

ಮೆಕ್ಯಾನಿಕಲ್ಎಂಜಿನಿಯರಿಂಗ್ ವಿಭಾಗದಲ್ಲಿ ಎಲ್ವಿನ್ ಕ್ರಿಸ್ ಡಿಸೋಜಾ 4ನೇ ರ‍್ಯಾಂಕ್ ಹಾಗೂ ಕಂಪ್ಯೂಟರ್ ಸೈನ್ಸ್ ಮತ್ತು ಡಿಸೈನ್ ವಿಭಾಗದಲ್ಲಿ ಮೌನಶ್ರೀ ಡಿ.ಪಿ. 6ನೇ ರ‍್ಯಾಂಕ್ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಪ್ರಾಚರ‍್ಯ ಡಾ ಪೀಟರ್ ಫೆರ್ನಾಂಡೀಸ್ ಅಭಿನಂದನೆ ಸಲ್ಲಿಸಿದ್ದಾರೆ.

Related posts

  ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ರಿಗೆ ಭಾರತ್ ರತ್ನ ಡಾ ಎ ಪಿ ಜೆ ಅಬ್ದುಲ್ ಕಲಾಂ ಎಜುಕೇಶನ್ ಎಕ್ಷಲೆನ್ಸ್ ಅವಾರ್ಡ್

Madhyama Bimba

ಬಜಗೋಳಿಯಲ್ಲಿ ನೂತನ ಫ್ಲೆಕ್ಸ್ ಫ್ಯಾಕ್ಟರಿ ಘಟಕ ಪ್ರಾರಂಭ

Madhyama Bimba

ಜವಾಹರ್ ಲಾಲ್ ನೆಹರು ಪ್ರೌಢಶಾಲೆ ವಿದ್ಯಾರ್ಥಿ ಬಸವರಾಜ್ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More