ಕಾರ್ಕಳ

ಕಾರ್ಕಳ: ಮಟ್ಕಾ ಜುಗಾರಿ ಆಟ- ಪ್ರಕರಣ ದಾಖಲು

ಕಾರ್ಕಳ: ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹ ಮಾಡುತ್ತಿದ್ದ ಸಾಗರ್ ಎಂಬಾತನ ಕೇಸು ದಾಖಲಾದ ಘಟನೆ ಸೆ. ೨೩ರಂದು ವರದಿಯಾಗಿದೆ.

ಕಾರ್ಕಳ ನಗರ ಪೊಲೀಸ್ ಠಾಣೆ(ತನಿಖೆ) ಪೊಲೀಸ್ ಉಪನಿರೀಕ್ಷಕರಾದ ಶಿವಕುಮಾರ್‌ರವರು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿ ಸಾಗರ್ ಎಂಬಾತನು ಕಲ್ಲೊಟ್ಟೆ-ಪತ್ತೊಂಜಿಕಟ್ಟೆ ಸಾರ್ವಜನಿಕ ರಸ್ತೆ ಬದಿಯ ಗೋಕರ್ಣನಾಥ ಕೋ ಒಪರೇಟಿವ್ ಸೊಸೈಟಿ ಬಳಿಯ ಕಟ್ಟಡದ 1 ಕೋಣೆಯಲ್ಲಿ ಸಾರ್ವಜನಿಕರಿಂದ ಮಟ್ಕ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹ ಮಾಡುತ್ತಿದ್ದನು.

ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ನಗದು ಹಣ, ಮಟ್ಕಾ ಸಂಖ್ಯೆ ಬರೆದ ಚೀಟಿ, ಪೆನ್ನು ಸ್ವಾಧೀಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಅಂಡಾರಿನಲ್ಲಿ ಆ. 16ರಂದು ಕೆಸರ್‌ಡೊಂಜಿ ಕೂಟ

Madhyama Bimba

ಕ್ರೈಸ್ಟ್‌ಕಿಂಗ್: ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

Madhyama Bimba

ಹೆಬ್ರಿ: ಚಿನ್ನ ಅಡವಿಟ್ಟು ಪೂರ್ತಿ ಹಣ ಕೊಡದೆ ವಂಚನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More