ಕಾರ್ಕಳ: ಕಾರ್ಕಳ ತಾಲೂಕು ಶ್ರೀ ಭಾರ್ಗವ ವಿವಿಧೋದ್ಧೇಶ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಸೆ. 19ರಂದು ಕಾರ್ಕಳ ತೆಳ್ಳಾರು ಚಿತ್ಪಾವನ ಸಂಘದ ಶ್ರೀ ಭಾರ್ಗವ ಸಭಾಭವನದಲ್ಲಿ ಜರಗಿತು.
ಸಹಕಾರಿಯ ಅಧ್ಯಕ್ಷ ಪಾಂಡುರಂಗ ಫಾಟಕದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಹಕಾರಿಯು 3,66,000 ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 6 ಡಿವಿಡೆಂಡ್ ಘೋಷಿಸಿದರು.
ಇನ್ಸೂರೆನ್ಸ್ ವಿಭಾಗದ ಹಿರಿಯ ಅಧಿಕಾರಿ ಸುಧಾಕರ್ ನಾಯಕ್ ಉಡುಪಿ ಸಾಲಗಾರರ ಇನ್ಸೂರೆನ್ಸ್ ಬಗ್ಗೆ ವಿವರ ನೀಡಿದರು.
ಸಹಕಾರಿ ಇಲಾಖೆಯ ಹಿರಿಯ ಅಧಿಕಾರಿ ನಾಗೇಶ ಡೋಂಗ್ರೆ ಶಿವಮೊಗ್ಗ ಉಪಸ್ಥಿತರಿದ್ದು ಅನೇಕ ಸಲಹೆ ಸೂಚನೆಗಳನ್ನು ನೀಡಿದರು.
ಸುಲಭಾ ದಾಮ್ಲೆ ಮತ್ತು ವಿನಯಾ ಫಾಟಕ್ ಪ್ರಾರ್ಥಿಸಿದರು. ಉಪಾಧ್ಯಕ್ಷ ಸುಧಾಕರ ಡೋಂಗ್ರೆ ಸ್ವಾಗತಿಸಿದರು. ಕಾರ್ಯದರ್ಶಿ ವಿಜಯಲಕ್ಷ್ಮೀ ವಾರ್ಷಿಕ ವರದಿ ಹಾಗೂ ಪರಿಶೋಧಿತ ಲೆಕ್ಕ ಪತ್ರಗಳನ್ನು ಮಂಡಿಸಿದರು. ನಿರ್ದೇಶಕಿ ರಕ್ಷಾಗೋರೆ ವಂದಿಸಿದರು.
