ದಕ್ಷಿಣ ಕನ್ನಡ ವರ್ತಕರ ವಿವಿಧೋದ್ದೇಶ ಸಹಕಾರ ಸಂಘ ನಿ. ಬಂಟ್ವಾಳ ಇದರ ಮೂಡುಬಿದಿರೆ ಅಲಂಗಾರು ಶಾಖೆಯು ಬಡಗ ಬಸದಿ ಮುಂಭಾಗದ ಫಾರ್ಚೂನ್ ಹೈವೇ 2 ಕಟ್ಟಡಕ್ಕೆ ಸ್ಥಳಾಂತರ ಸಮಾರಂಭವು ಇಂದು ಸೆ. 26ರಂದು ನಡೆಯಿತು.
ಉದ್ಯಮಿ ಕೆ ಶ್ರೀಪತಿ ಭಟ್ ಅವರು ಸ್ಥಳಾಂತರಿತ ಸಂಘವನ್ನು ಉದ್ಘಾಟಿಸಿ ಬೆಳೆಯುತ್ತಿರುವ ನಗರಿ ಮೂಡುಬಿದಿರೆಯಲ್ಲಿ ವರ್ತಕರ ಸಹಕಾರಿ ಸಂಘ ಉತ್ತಮ ಆರ್ಥಿಕ ಚಟುವಟಿಕೆ ನಡೆಸಿ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು.
ಉದ್ಯಮಿ ನಾರಾಯಣ ಪಿಎಂ ಭದ್ರತಾ ಕೊಠಡಿ ಉದ್ಘಾಟಿಸಿ ಶುಭ ಕೋರಿದರು. ಅಬುಲ್ ಅಲಾ ಕಂಪ್ಯೂಟರ್ ಉದ್ಘಾಟಿಸಿದರು.
ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಸುಭಾಶ್ಚಂದ್ರ ಜೈನ್ ಅವರು ಸಣ್ಣ ಪ್ರಮಾಣದ ವರ್ತಕರ ಮೂಲಕ ಪ್ರಾರಂಭಗೊಂಡ ಸಂಘ 100ಕೋಟಿಗೂ ಮಿಕ್ಕಿ ಠೇವಣಿ ಹೊಂದಿದ್ದು, ಆರ್ಹ ವ್ಯಕ್ತಿಗಳಿಗೆ ಸಾಲ ನೀಡಲು ಸಿದ್ಧವಿರುವುದಾಗಿ ತಿಳಿಸಿದರು.
ವಾಸ್ತು ತಜ್ಞ ಡಾ. ಸುದರ್ಶನ ಕುಮಾರ್, ಉದ್ಯಮಿಗಳಾದ ನಾಗರಾಜ್ ಬಿ., ಮಹೇಂದ್ರ ವರ್ಮಾ ಜೈನ್, ರೋಟರಿ ಶಾಲೆ ಸಂಚಾಲಕ ಪ್ರವೀಣಚಂದ್ರ ಜೈನ್, ನಿವೃತ ಸಹಾಯಕ ಕಮಿಷನರ್ ಮಾಣಿಕ್ಯರಾಜ್ ಜೈನ್, ನ್ಯಾಯವಾದಿ ಶ್ವೇತಾಜೈನ್, ಉದ್ಯಮಿ ಸಿ ಹೆಚ್ ಗಫೂರ್, ನಿವೃತ ಬ್ಯಾಂಕ್ ಅಧಿಕಾರಿ ಜಯರಾಜ್ ಕಾಂಬ್ಳಿ, ಧವಳ ಕಾಲೇಜ್ ಪ್ರಾಂಶುಪಾಲ ಪಾರ್ಶ್ವನಾಥ ಅಜ್ರಿ, ನಿವೃತ ಶಿಕ್ಷಕ ಜಗನ್ನಾಥ ಸಫಲ್ಯ, ಭೋಜರಾಜ ಜೈನ್, ಜೈನ್ ಮಿಲನ್ ಅಧ್ಯಕ್ಷ ಮಹೇಂದ್ರ ಕುಮಾರ್ ಜೈನ್, ಕಟ್ಟಡದ ಮಾಲಕ ಚಕ್ರೇಶ್ವರ ಅರಿಗ ಹಾಗೂ ಅವರ ಮಕ್ಕಳು, ಶ್ರೀಮತಿ ಚಂಪಾ ಶೆಟ್ಟಿ, ಭಾರತ್ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷೆ ಶ್ರೀಮತಿ ಪದ್ಮಲತಾ ವೀರಸೇನ ಹೆಗ್ಡೆಯವರ ಪುತ್ರಿ ನವ್ಯಾ, ಅಳಿಯ ತೇಜಸ್, ಡಿ. ಜೆ. ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಶಶಿಕಾಂತ್, ಉದ್ಯಮಿ ಶ್ರೀವರ್ಮ ಜೈನ್, ಪಾರ್ಶ್ವನಾಥ ಜೈನ್ ಮಾಳ, ಪ್ರಕಾಶ್ ಜೈನ್ ಮಾರ್ನಾಡ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವರ್ತಕರ ಸಂಘದ ಉಪಾಧ್ಯಕ್ಷ ಮಂಜುನಾಥ ರೈ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್ ಜೈನ್, ನಿರ್ದೇಶಕರುಗಳಾದ ಸ್ವಪ್ನ ರಾಜರತ್ನ, ರಾಜೇಶ್ ಬಿ., ಗಜೇಂದ್ರ ಪ್ರಭು, ದಿವಾಕರ ದಾಸ್, ವಿಜಯಕುಮಾರಿ ಇಂದ್ರ, ಸುಧಾಕರ್ ಸಾಲ್ಯಾನ್, ಮೈಕಲ್ ಡಿಕೋಸ್ಟಾ, ಹೇಮಂತ್ ಕುಮಾರ್ ಜೈನ್, ರವೀಂದ್ರ, ನಾರಾಯಣ್ ಸಿ ಪೆರ್ನೆ, ಲೋಕೇಶ್ ಸುವರ್ಣ, ಬಯ್ಯಪ್ಪ ಶೆಟ್ಟಿ, ಜಯರಾಜ್, ಶಾಖಾಧಿಕಾರಿ ನಿತೀಕ್ಷಾ ಜೈನ್ ಹಾಗೂ ಸಿಬ್ಬಂದಿಗಳು ಸಹಕರಿಸಿದರು. ನಿರ್ದೇಶಕ ಡಾ. ಸುದೀಪ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
