ಕಾರ್ಕಳಹೆಬ್ರಿ

ಮಾತಿಬೆಟ್ಟು ಬಿಲ್ಲವ ಸಂಘದ ಯುವ ಘಟಕದ ವತಿಯಿಂದ ಆದಿತ್ಯ ಹರೀಶ್ ಪೂಜಾರಿಯವರಿಗೆ ಅಭಿನಂದನೆ

ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ವತಿಯಿಂದ ಆಯೋಜಿಸಲಾದ ರಾಷ್ಟ್ರಮಟ್ಟದ ಇನ್ಸ್‌ಪೈರ್ ಮಾನಕ್ ಮಾದರಿ ರಚನಾ ಸ್ಪರ್ಧೆಯಲ್ಲಿ ಕುಕ್ಕುಜೆ ಪ್ರೌಢಶಾಲೆಯ ವಿದ್ಯಾರ್ಥಿ ಆದಿತ್ಯ ಹರೀಶ್ ಪೂಜಾರಿ ಎಳ್ಳಾರೆ ಭಾಗವಹಿಸಿ, ಕುಕ್ಕುಜೆ ಪ್ರೌಢಶಾಲೆಯ ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಮಾಜ ವಿಜ್ಞಾನ ಶಿಕ್ಷಕರಾದ ಸುರೇಶ್ ಮರಕಾಲ ಅವರ ಮಾರ್ಗದರ್ಶನದಲ್ಲಿ “ಕಟ್-ಇಟ್-ಈಸಿ ” ಎಂಬ ಯಂತ್ರದ ಮಾದರಿಯನ್ನು ರಚಿಸಿ, ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಯ ಈ ಸಾಧನೆಯನ್ನು ಗುರುತಿಸಿ, ಮಾತಿಬೆಟ್ಟು ಬಿಲ್ಲವ ಸಂಘದ ಯುವ ಘಟಕದ ವತಿಯಿಂದ ಯುವ ಘಟಕದ ಅಧ್ಯಕ್ಷರಾದ ರಂಜಿತ್ ಸುವರ್ಣ ಅವರ ನೇತೃತ್ವದಲ್ಲಿ ಆದಿತ್ಯ ಹರೀಶ್ ಪೂಜಾರಿ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತಿಬೆಟ್ಟು ಬಿಲ್ಲವ ಸಂಘದ ಅಧ್ಯಕ್ಷರಾದ ಮಂಜುನಾಥ್ ಪೂಜಾರಿ, ಸಂಜೀವ ಪೂಜಾರಿ ಕಡ್ತಲ, ಸತೀಶ್ ಪೂಜಾರಿ ಎಳ್ಳಾರೆ, ಭಾಸ್ಕರ್ ಪೂಜಾರಿ, ಸುಜಿತ್ ಕಡ್ತಲ, ಹರೀಶ್ ಎಲ್‌ಐಸಿ, ರತ್ನಾಕರ್ ಪೂಜಾರಿ ಪೆರ್ಮನ್, ರೋಶನ್ ಮುಳ್ಳಾಡು ಯುವ ಘಟಕದ ಅಧ್ಯಕ್ಷರಾದ ರಂಜಿತ್ ಸುವರ್ಣ, ಕಾರ್ಯದರ್ಶಿ ಅಮರ್‌ನಾಥ್, ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Related posts

ರಾಷ್ಟ್ರ ಮಟ್ಟದ ತಾಂತ್ರಿಕ ಮಾದರಿ ಪ್ರದರ್ಶನ ಸ್ಪರ್ಧೆ: ಹಿರ್ಗಾನದ ರಿತಿಕ್ ಪೂಜಾರಿ ಪ್ರಥಮ

Madhyama Bimba

ಕ್ರೈಸ್ಟ್‌ಕಿಂಗ್: ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

Madhyama Bimba

ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್ ಕಾರ್ಕಳ – ಸೆ. 20ರಂದು ಪದಗ್ರಹಣ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More