ಕಾರ್ಕಳ

ಕಾರ್ಕಳ ವೆಂಕಟರಮಣ ಕಾಲೇಜಿನಲ್ಲಿ ವಾಣಿಜ್ಯ ಮತ್ತು ಮಾನವಿಕ ಸಂಘ ಉದ್ಘಾಟನೆ

ಶ್ರೀ ವೆಂಕಟರಮಣ ಪ್ರಥಮ ದರ್ಜೆ ಕಾಲೇಜು, ಕಾರ್ಕಳ ಇಲ್ಲಿ ವಾಣಿಜ್ಯ ಸಂಘ ಮತ್ತು ಮಾನವಿಕ ಸಂಘಗಳ ಉದ್ಘಾಟನಾ ಕಾರ್ಯಕ್ರಮವನ್ನು ಚಾಂಪಿಯನ್ಸ್ ಅಕೆಡಮಿಯ ಮ್ಯಾನೇಜರ್ ವಿಕಾಸ್ ಬಂಗೇರ ದೀಪ ಬೆಳಗಿಸಿ ಉದ್ಘಾಟಿಸಿದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿ ನೀಡುವುದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೇಗೆ ಸಿದ್ಧತೆ ನಡೆಸಬೇಕು, ಅಧ್ಯಯನವನ್ನು ಹೇಗೆ ಯೋಜಿಸಿಕೊಳ್ಳಬೇಕು ಹಾಗೂ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಯಾವ ರೀತಿಯ ತಯಾರಿ ಅಗತ್ಯ ಎಂಬುದರ ಕುರಿತು ಉಪಯುಕ್ತ ಮಾಹಿತಿಯನ್ನು ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಗೀತಾ ಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಡಾ| ಶ್ವೇತಾ ಸ್ವಾಗತಿಸಿ, ಮುನೀರಾ ನಿರ್ವಹಿಸಿ, ಕು. ಅರ್ಪಿತಾ ಧನ್ಯವಾದವಿತ್ತರು.

Related posts

ಕೆರ್ವಾಶೆಯಲ್ಲಿ ಆ. 09ರಂದು ಆಟಿಡೊಂಜಿ ಕೆಸರ್ದ ಕೂಟ

Madhyama Bimba

ರೆಂಜಾಳ ಭೂಕುಸಿತ ಸ್ಥಳದಲ್ಲಿ ಜಿಎಸ್‌ಐ ಬೆಂಗಳೂರು ತಂಡ ಪರಿಶೀಲನೆ

Madhyama Bimba

ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಹಾತ್ಮ ಗಾಂಧಿ ಜಯಂತಿ – ಲಾಲ್ ಬಹುದ್ದೂರ್ ಶಾಸ್ತ್ರೀ ಅವರ ಜನ್ಮ ದಿನಾಚರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More