ಕಾರ್ಕಳಹೆಬ್ರಿ

ಕಾರ್ಕಳ: ಲಕ್ಕಿ ಗಿಪ್ಟ್ ಸ್ಕೀಮ್‌ನಲ್ಲಿ ಹಣ ಹೂಡಿಕೆ- ಗ್ರಾಹಕರಿಗೆ ಪಂಗನಾಮ- ಕೇಸು ದಾಖಲು

ಕಾರ್ಕಳ: ಲಕ್ಕಿ ಗಿಪ್ಟ್ ಸ್ಕೀಮ್‌ನಲ್ಲಿ ಹಣ ಹೂಡಿಕೆ ಮಾಡಿ ಸ್ಕೀಮ್ ಅವಧಿ ಮುಗಿದ ಮೇಲೆ ಹಣವನ್ನಾಗಲಿ ಅಥವಾ ಯಾವುದೇ ಸೊತ್ತನ್ನು ನೀಡದೇ ಗ್ರಾಹಕರಿಗೆ ಪಂಗನಾಮ ಹಾಕಿದ ಜೋಡುರಸ್ತೆಯಲ್ಲಿರುವ ಜಯತೀರ್ಥರವರ ಶ್ರೀ ದುರ್ಗಾ ಇಲೆಕ್ಟ್ರಾನಿಕ್ಸ್ & ಫರ್ನಿಚರ್‌ನ ಮಾಲಕರ ಮೇಲೆ ಕೇಸು ದಾಖಲಾಗಿದೆ.

ಮರ್ಣೆಯ ರಶ್ಮಿ ಕುಲಾಲ್ ಎಂಬವರು ಇಲ್ಲಿ ಲಕ್ಕಿ ಸ್ಕೀಮ್‌ಗೆ ಪ್ರತೀ ತಿಂಗಳು ರೂ.1,000/- ರಂತೆ ಒಟ್ಟು 20 ತಿಂಗಳು 20,000/- ಕಂತಿನ ಹಣ ಪಾವತಿಸಿದ್ದರು. ಪ್ರತೀ ತಿಂಗಳು ಲಕ್ಕಿ ಡ್ರಾ ನಡೆಸಿ ವಿಜೇತರಿಗೆ ಸೊತ್ತನ್ನು ನೀಡುವುದಾಗಿ ನಂಬಿಸಿ, ಸ್ಕೀಮ್ ಅವಧಿ ಮುಗಿದ ಮೇಲೆ ಹಣ ಅಥವಾ ಯಾವುದಾದರೂ ಸೊತ್ತನ್ನು ನೀಡದೇ ಸ್ಕೀಮಿನ ಸದಸ್ಯರಿಗೆ ಯಾವುದನ್ನು ಹಿಂತಿರುಗಿಸದೆ ಮೋಸ ಮಾಡಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಲಕ್ಕಿ ಸ್ಕೀಮ್‌ನ ಬಗ್ಗೆ ಗ್ರಾಹಕರು ಎಚ್ಚರ ವಹಿಸುವುದು ಅಗತ್ಯ. ಇತ್ತೀಚಿನ ದಿನಗಳಲ್ಲಿ ಲಕ್ಕಿ ಸ್ಕೀಮ್‌ನ ದಂಧೆ ವ್ಯಾಪಕವಾಗಿ ಆರಂಭಗೊಳ್ಳುತ್ತಿದ್ದು, ಹಲವು ಕಡೆ ಗ್ರಾಹಕರು ಮೋಸ ಹೋಗುತ್ತಿರುವ ಘಟನೆಗಳು ವರದಿಯಾಗುತ್ತಿದೆ. ಕೆಲವೊಂದು ಕಡೆ ವಸ್ತುಗಳನ್ನು ನೀಡಿದರೂ ಗುಣಮಟ್ಟ ಇಲ್ಲದೆ ಗ್ರಾಹಕರು ಲಕ್ಕಿ ಸ್ಕೀಮ್‌ನ ಮೋಸಕ್ಕೆ ಒಳಗಾಗುತ್ತಿದ್ದಾರೆ.

Related posts

ಅಜೆಕಾರು: ಶಾಲೆಯಲ್ಲಿ ಕಸಕ್ಕೆ ಬೆಂಕಿ- ವಸ್ತು ಸ್ಪೋಟ: 4 ಮಕ್ಕಳಿಗೆ ಸುಟ್ಟ ಗಾಯ

Madhyama Bimba

ಬೈಲೂರು ಬಸ್ರಿ ಶಾಲಾ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ

Madhyama Bimba

ಕಾರ್ಕಳ ಜ್ಞಾನಸುಧಾ: ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಚಟುವಟಿಕೆಗಳ ಉದ್ಘಾಟನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More