ಕಾರ್ಕಳ

ಅಜೆಕಾರು: ಶಾಲೆಯಲ್ಲಿ ಕಸಕ್ಕೆ ಬೆಂಕಿ- ವಸ್ತು ಸ್ಪೋಟ: 4 ಮಕ್ಕಳಿಗೆ ಸುಟ್ಟ ಗಾಯ

ಅಜೆಕಾರು: ಶಾಲೆಯಲ್ಲಿ ಕಸವನ್ನು ಒಟ್ಟುಗೂಡಿಸಿ ಬೆಂಕಿ ಹಾಕಿದ ಸಂದರ್ಭದಲ್ಲಿ ಕಸದಲ್ಲಿದ್ದ ಯಾವುದೋ ವಸ್ತು ಸ್ಪೋಟವಾಗಿ 4 ಮಂದಿ ಮಕ್ಕಳಿಗೆ ಸುಟ್ಟ ಗಾಯವಾದ ಘಟನೆ ಜೂ. 03ರಂದು ವರದಿಯಾಗಿದೆ.

ವಿದ್ಯಾರ್ಥಿಗಳಾದ ಸಂಸ್ಕೃತ್ (12), ಗಗನ್ (12), ಹೃತ್ವಿಕ್(12) ಹಾಗೂ ಅದ್ವಿನ್(11) ಗಾಯಗೊಂಡವರು.

ವಿದ್ಯಾರ್ಥಿಗಳು ಶಾಲಾ ದೈಹಿಕ ಶಿಕ್ಷಕರು ತಿಳಿಸಿದಂತೆ ಕಂಪ್ಯೂಟರ್ ಕ್ಲಾಸನ್ನು ಕ್ಲಿನಿಂಗ್ ಮಾಡಿ ಅಲ್ಲಿನ ಕಸವನ್ನು ಶಾಲೆಯ ಕಾಂಪೌಂಡನಲ್ಲಿ ರಾಶಿ ಹಾಕಿ ಬೆಂಕಿ ಹಾಕಿ ಸುಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಶಿಕ್ಷಕರ ನಿರ್ಲಕ್ಷತನದಿಂದ ಈ ಅವಘಡ ಸಂಭವಿಸಿದೆ ಎಂದು ಮಕ್ಕಳ ಹೆತ್ತವರು ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಕಾರ್ಕಳ: ಆನ್‌ಲೈನ್‌ನಿಂದ ಲಕ್ಷಾಂತರ ರೂಪಾಯಿ ವಂಚನೆ

Madhyama Bimba

ಬೆಳ್ಮಣ್ಣು ವ್ಯವಸಾಯ ಸಹಕಾರಿ ಸಂಘದಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರೇಮ ಶೆಟ್ಟಿಯವರಿಗೆ ಸನ್ಮಾನ

Madhyama Bimba

ಎಸ್.ವಿ.ಟಿ.: ವಿದ್ಯಾರ್ಥಿ ಸಂಘದ ಚುನಾವಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More