ಕಾರ್ಕಳ

ಬೈಲೂರು ಬಸ್ರಿ ಶಾಲಾ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ

ಬೈಲೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ, ಬೈಲೂರು ಇಲ್ಲಿಯ ಅಂಗನವಾಡಿ ಮಕ್ಕಳಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇರ್ವತ್ತೂರು ಕೊಳಕೆ ಇಲ್ಲಿಯ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಬಸ್ರಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಸಂಚಾಲಕರಾದ ಆನಂದ ಪೂಜಾರಿ ಅವರು ಉಚಿತವಾಗಿ ಕೊಡ ಮಾಡಿದ ಸಮವಸ್ತ್ರವನ್ನು ಮಕ್ಕಳಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ದಾನಿಗಳಾದ ಆನಂದ ಪೂಜಾರಿ, ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ವಸಂತಿ ಹೆಚ್ ಜಿ, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ಸದಾನಂದ ಸಾಲಿಯಾನ್, ಪ್ರಧಾನ ಕಾರ್ಯದರ್ಶಿ ಹರೀಶ್ ಆಚಾರ್ಯ, ಮಾಜಿ ಕಾರ್ಯದರ್ಶಿ ನಿತಿನ್ ಶೆಟ್ಟಿ, ಎಸ್. ಡಿ. ಎಂ. ಸಿ. ಅಧ್ಯಕ್ಷ ವಸಂತ ಕುಲಾಲ್, ಸದಸ್ಯ ಮಣಿಕಂಠ, ಅಂಗನವಾಡಿ ಶಿಕ್ಷಕಿ ಶ್ರೀಮತಿ ವಾಣ, ಬಸ್ರಿ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Related posts

ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಎಸ್. ಪ್ರವೀಣ್ ಕುಮಾರ್

Madhyama Bimba

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ 76ನೇ ವಯಸ್ಸಿನಲ್ಲಿ ಅಂಗಾಂಗ ದಾನ: ಜೀವ ಉಳಿಸಲು ವಯಸ್ಸು ಎಂದಿಗೂ ಅಡ್ಡಿಯಲ್ಲ ಎಂಬುದನ್ನು ಸಾಬೀತುಪಡಿಸಿದ ಮಹಿಳೆ

Madhyama Bimba

ಹೆಬ್ರಿ: ಸಂಜೀವಿನಿ ಯೋಜನೆಯ ಹಣ ದುರುಪಯೋಗ- ಪ್ರಕರಣ ದಾಖಲು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More