ಹೆಬ್ರಿ: ವರಂಗ ಗ್ರಾಮದ ತಲಮನೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ನಡೆಸುತ್ತಿದ್ದವರ ಮೇಲೆ ಕೇಸು ದಾಖಲಾದ ಘಟನೆ ಸೆ. 29ರಂದು ವರದಿಯಾಗಿದೆ.
ಹಿಂಸಾತ್ಮಕವಾಗಿ ಕೋಳಿ ಅಂಕ ನಡೆಸುತ್ತಿದ್ದ ಬಗ್ಗೆ ಬಂದ ಮಾಹಿತಿ ಮೇರೆಗೆ ಪಿ.ಎಸ್.ಐ (ತನಿಖೆ) ಚಂದ್ರ ಎ. ಕೆ.ಯವರು ದಾಳಿ ನಡೆಸಿ ಸ್ಥಳದಲ್ಲಿದ್ದ ಅಶೋಕ ಮತ್ತು ಪ್ರಶಾಂತ ಎಂಬವರನ್ನು ವಶಕ್ಕೆ ಪಡೆದಿರುತ್ತಾರೆ.
ಜೂಜಾಟಕ್ಕೆ ಬಳಸಿದ್ದ 8 ಕೋಳಿ, ಕೋಳಿ ಬಾಳು, ನಗದು ಹಾಗೂ ಇನ್ನಿತರ ವಸ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಕೋಳಿ ಅಂಕದಲ್ಲಿ ನಿರತರಾಗಿದ್ದ ಸುರೇಶ್ ಮುದ್ರಾಡಿ, ಪ್ರಭಾಕರ ಸುವರ್ಣ ಶೇಣೆರ ಬೆಟ್ಟು, ಸಂತೋಷ್ ಪೂಜಾರಿ ಅಜೆಕಾರ್, ಸುರೇಶ್ ಮಾಳ, ಪ್ರಸನ್ನ ಮುದ್ರಾಡಿ, ನಾರಾಯಣ ಶೆಟ್ಟಿ ಹೆಬ್ರಿ, ಪವನ್ ಕಾಡುಹೊಳೆ, ಮಂಜುನಾಥ ಹಿರಿಯಡ್ಕ, ಅನಿಲ್ ಪೆರ್ಡೂರು, ಕೌಶಿಕ ಮುದ್ರಾಡಿ, ನಿತೀನ್ ಹೆಬ್ರಿ, ಸುಮಿತ್ ಪೆರ್ಡೂರು, ಕರುಣಾಕರ ಶಿವಪುರ, ಸಂತೋಷ್ ವರಂಗ, ಶರತ್ ಪೆರ್ಡೂರು, ರಮಾನಂದ ಹರಿಖಂಡಿಗೆ, ಭಾಸ್ಕರ ಬಚ್ಚಪ್ಪು, ರವಿ ಎಂಬವರು ಸ್ಥಳದಿಂದ ಪರಾರಿಯಾಗಿರುತ್ತಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
