ಕಾರ್ಕಳ: ಮಲೇಷಿಯದಲ್ಲಿ ಉದ್ಯೋಗ ತೆಗೆಸಿಕೊಡುವುದಾಗಿ ನಂಬಿಸಿ ಹಣ ಪಡೆದುಕೊಂಡು ಸುಳ್ಳು ದಾಖಲೆ ನೀಡಿ ಮೋಸವೆಸಗಿರುವ ಘಟನೆ ವರದಿಯಾಗಿದೆ.
ಮಿಯ್ಯಾರು ಗ್ರಾಮದ ಪ್ರಕಾಶ ಆಚಾರ್ಯ (34) ಮೋಸಹೋದವರು.
ಇವರು ಪೊಟೋಗ್ರಾಪಿ ವೃತ್ತಿ ಮಾಡುತ್ತಿದ್ದು, ಬಜಗೋಳಿಯ ಕೃಷ್ಣ ಕುಲಾಲ್ ಮತ್ತು ಬೆಂಗಳೂರಿನ ಮೋಹಿತ್ ಮಲೇಷಿಯಾದ ರೆಸ್ಟೋರಂಟ್‌ನಲ್ಲಿ ಉದ್ಯೋಗ ತೆಗೆಸಿಕೊಡುವುದಾಗಿ ನಂಬಿಸಿ ಜಾಹಿರಾತಿನ ಪೋಟೊ ಮೊಬೈಲಿಗೆ ಕಳುಹಿಸಿ ಬಳಿಕ ಉದ್ಯೋಗದ ಬಗ್ಗೆ ದಾಖಲೆ ಪತ್ರ ಮಾಡಲು, ಮಲೇಷಿಯಕ್ಕೆ ಹೋಗುವ ಖರ್ಚು, ವಿಸಾದ ಹಣವನ್ನು ಭರಿಸುವಂತೆ ಹೇಳಿ ಗೂಗಲ್ ಪೇ ಮೂಲಕ ಹಂತಹಂತವಾಗಿ ರೂ. 1,40,000ವನ್ನು ಕೃಷ್ಣ ಕುಲಾಲ್ ಖಾತೆಗೆ ಹಾಗೂ ರೂ. 85,000ವನ್ನು ಮೋಹಿತ್ ಖಾತೆಗೆ ವರ್ಗಾವಣೆ ಮಾಡಿರುತ್ತಾರೆ.
ನಂತರ ಪ್ರಕಾಶ ಆಚಾರ್ಯರಿಗೆ ಮಲೇಷಿಯಕ್ಕೆ ಹೋಗಲು ವಿಮಾನದ ಟಿಕೆಟ್ ಮತ್ತು ಇಮ್ರಿಗೇಷನ್ ಪಾಸ್, ಎಂಪ್ಲಾಯ್ ಮೆಂಟ್ ಪಾಸ್ ಕಳುಹಿಸಿ ಕೊಟ್ಟಿದ್ದು, ಅವರು ಮಲೇಷಿಯಕ್ಕೆ ಹೋದಾಗ ಅಲ್ಲಿನ ವಿಮಾನ ನಿಲ್ದಾಣದ ಅಧಿಕಾರಿಗಳು ದಾಖಲೆ ಪರಿಶೀಲಿಸಿದಾಗ ಇಮ್ರಿಗೇಷನ್ ಪಾಸ್, ಎಂಪ್ಲಾಯ್ ಮೆಂಟ್ ಪಾಸ್ ನಕಲಿ ಎಂದು ತಿಳಿದು ಬಂದಿರುತ್ತದೆ.
ಪ್ರಕಾಶ್‌ರವರು ಮಲೇಷಿಯದಲ್ಲಿದ್ದ ಸಂದರ್ಭ ಮನ್ವಿರ್ ಸಿಂಗ್ ಎಂಬ ಎಜೆಂಟ್ ರೂ.35,000 ಪಡೆದುಕೊಂಡಿರುತ್ತಾನೆ.
ಕೃಷ್ಣ ಹಾಗೂ ಮೋಹಿತ್ ಪ್ರಕಾಶ್ ಆಚಾರ್ಯರಿಗೆ ಸುಳ್ಳು ದಾಖಲೆ ನೀಡಿ ಮೋಸ ಮಾಡಿರುವುದಾಗಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
