ಲಯನ್ಸ್ ಕ್ಲಬ್ ಮುನಿಯಾಲ್ ವತಿಯಿಂದ ಕುಕ್ಕುಜೆ ಮೂಡುಬೆಟ್ಟು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಮೂರು ಮರದ ಕುರ್ಚಿ ಹಾಗೂ ಮೂಡುಬೆಟ್ಟು ಅಂಗನವಾಡಿಗೆ ಒಂದು ಮರದ ಕುರ್ಚಿಯನ್ನು ಶಾಲೆಯ ಮುಖ್ಯ ಶಿಕ್ಷಕರಿಗೆ ಹಸ್ತಾಂತರ ಮಾಡಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶೇಖರ್ ಕುಕ್ಕುಜೆ, ಶಾಲಾ ನಿವೃತ್ತ ಮುಖ್ಯ ಶಿಕ್ಷಕರಾದ ಡಿ. ಲಕ್ಷ್ಮಣ್ ಕುಕ್ಕುಜೆ, ಮುನಿಯಾಲ್ ಲಯನ್ಸ್‌ನ ಅಧ್ಯಕ್ಷರಾದ ಲ| ಅಶೋಕ್ ಕುಮಾರ್, ಲ| ಸಂಪತ್ ಕುಮಾರ್, ಲ| ಮಂಜುನಾಥ್, ಲ| ಮಂಜುನಾಥ್. ಕೆ, ಲ| ಹರೀಶ್ ದುಗ್ಗನ್‌ಬೆಟ್ಟು, ವಕೀಲರಾದ ಲ| ರಾಘವ ಕುಕ್ಕುಜೆ, ಶಾಲಾ ಹಳೆ ವಿದ್ಯಾರ್ಥಿಗಳಾದ ಹರೀಶ್ ಕುಕ್ಕುಜೆ, ವಿಜಯ ಪಲಬೆಟ್ಟು, ಶಾಲಾ ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
