ಲಯನ್ಸ್ ಕ್ಲಬ್ ಕಾರ್ಕಳ ಹಾಗೂ ಬಿಲ್ಲವ ಸಂಘ ಕಾರ್ಕಳ ಮಹಾಲಿಂಗೇಶ್ವರ ಯುವಕ ಮಂಡಲ, ಮಹಿಳಾ ಮಂಡಲ ಪೆರ್ವಾಜೆ, ಯುವವಾಹಿನಿ ಕಾರ್ಕಳ ಘಟಕ, ಗುಡ್ಡೆಯಂಗಡಿ ಫ್ರೆಂಡ್ಸ್, ಎಸ್‌ಸಿಐ ಕಾರ್ಕಳ ರಾಕ್ ಸಿಟಿ, ಕ್ಯಾಥೋಲಿಕ್ ಸಭಾ ಕಾರ್ಕಳ ಟೌನ್, ಐಸಿವೈಎಂ ಕಾರ್ಕಳ ಟೌನ್, ಜಸ್ಟಿಸ್ ಆಂಡ್ ಪೀಸ್ ಕಮಿಷನ್, ಹೆಲ್ತ್ ಕಮಿಷನ್ ಕ್ರೈಸ್ಟ್ ಕಿಂಗ್ ಚರ್ಚ್ ಕಾರ್ಕಳ, ಫ್ರೆಂಡ್ಸ್ ಪವರ್ ಜಿಮ್ ಜೋಡುರಸ್ತೆ, ಸೇವಾಧರ್ಮ ಸಂಸ್ಥೆ, ಕಾರ್ಕಳ ಸ್ಪೋರ್ಟ್ಸ್ ಕ್ಲಬ್ ಹಾಗೂ ಇಂಜಿನಿಯರ್ಸ್ ಅಸೋಸಿಯೇಷನ್ ಕಾರ್ಕಳ ಇವರ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ, ಉಚಿತ ಆರೋಗ್ಯ, ಕಣ್ಣಿನ ಹಾಗೂ ದಂತ ತಪಾಸಣಾ ಶಿಬಿರರವು ನಾಳೆ (ಅ.3ರಂದು) ಬೆಳಗ್ಗೆ 9.30ರಿಂದ ಸಂಜೆ 3.30ರವರೆಗೆ ಗಾಂಧಿ ಮೈದಾನ ಸಮೀಪದ ಕ್ರೈಸ್ಟ್ ಕಿಂಗ್ ಚರ್ಚ್ ಕ್ಯಾಂಪಸ್‌ನ ಎಕ್ಸಲೆನ್ಸ್ ಪ್ರೊಫೆಷನಲ್ ಡಿಗ್ರಿ ಕಾಲೇಜಿನಲ್ಲಿ ನಡೆಯಲಿದೆ ಎಂದು ಕಾರ್ಕಳ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಆಶಿಶ್ ಶೆಟ್ಟಿ ತಿಳಿಸಿದರು.
ಅ. ೦೨ರಂದು ಕಾರ್ಕಳ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶಿಬಿರದಲ್ಲಿ ಲಯನ್ಸ್ ಕ್ಲಬ್‌ನೊಂದಿಗೆ ಎಕ್ಸಲೆನ್ಸ್ ಪ್ರೊಫೆಷನಲ್ ಡಿಗ್ರಿ ಕಾಲೇಜು ಕಾರ್ಕಳ, ರಕ್ತನಿಧಿ ಘಟಕ ಜಿಲ್ಲಾ ಆಸ್ಪತ್ರೆ ಉಡುಪಿ, ನಿಟ್ಟೆ ಗಾಜ್ರಿಯಾ ಆಸ್ಪತ್ರೆ ಕಾರ್ಕಳ ಹಾಗೂ ಡಾ. ಅಗರ್ವಾಲ್ ಕಣ್ಣಿನ ಆಸ್ಪತ್ರೆ ಮಂಗಳೂರು ಇವರು ಪಾಲ್ಗೊಳ್ಳಲಿದ್ದಾರೆ.
ಎ.ಬಿ. ಶೆಟ್ಟಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್, ಮಂಗಳೂರು ಇವರ ನೇತೃತ್ವದಲ್ಲಿ ಉಚಿತ ದಂತ ತಪಾಸಣಾ ಶಿಬಿರವೂ ನಡೆಯಲಿದೆ.
ಗೋಷ್ಠಿಯಲ್ಲಿ ಕಾರ್ಯದರ್ಶಿ ಎಡ್ವರ್ಡ್ ಡಿಸೋಜಾ, ಜಾರ್ಜ್ ಸ್ವೀವನ್ ಮಿನೇಜಸ್, ನೋವಲ್ ಡಿಸಿಲ್ವ ಉಪಸ್ಥಿತರಿದ್ದರು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ತಿಳಿಸಿದ್ದು, ಹೆಚ್ಚಿನ ಮಾಹಿತಿಗಾಗಿ 8277392576, 9845259949 ಸಂಪರ್ಕಿಸುವಂತೆ ತಿಳಿಸಿದ್ದಾರೆ.
