ಹೆಬ್ರಿಯ ಚಾರದ ಬಳಿ ಬೈಕ್ ಸ್ಕಿಡ್ ಆಗಿ ಗಾಯಗೊಂಡ ಘಟನೆ ವರದಿ ಆಗಿದೆ
ದಿನಾಂಕ 20/10/2024 ರಂದು ಗಂಡ ರವೀಂದ್ರ ಎಂಬವರು KA-20-EZ-4478 ಮೋಟಾರ್‌ಸೈಕಲ್‌ನಲ್ಲಿ ರವಿಂದ್ರರವರು ಸವಾರನಾಗಿ ಹಾಗೂ ಗಂಗೆ ಸಹಸವಾರಳಾಗಿ ಹಾಗೂ ಮಗ ರಿಶ್ಯಂತ್‌ನನ್ನು ಕುಳ್ಳಿರಿಸಿಕೊಂಡು ಹೆಬ್ರಿ ಆಸ್ಪತ್ರೆಗೆ ಹೋಗುವುದಕ್ಕಾಗಿ ಚಾರ ನಾಗ ಬ್ರಹ್ಮ ಸ್ಥಾನ ಬಳಿ ಸಂಜೆ 03:15 ಗಂಟೆಗೆ ತಲುಪುವಾಗ ಈ ಅಪಘಾತ ನಡೆದಿದೆ.
ಮೋಟಾರ್‌ಸೈಕಲ್ ಚಲಾಯಿಸುತ್ತಿದ್ದ ರವಿಂದ್ರರವರು ಮೋಟಾರ್‌ಸೈಕಲ್‌ನ್ನು ರಸ್ತೆಯಲ್ಲಿದ್ದ ಹೊಂಡ ತಪ್ಪಿಸುವ ಸಲುವಾಗಿ ಒಮ್ಮೇಲೆ ಬ್ರೇಕ್‌ಹಾಕಿದಾಗ ಮೋಟಾರ್‌ಸೈಕಲ್‌ಸಮೇತ ರಸ್ತೆಗೆ ಬಿದ್ದು ಗಂಗೆಯವರಿಗೆ ಬಲ ಕಣ್ಣಿನ ಹುಬ್ಬಿನ ಬಳಿ ರಕ್ತಗಾಯ ಹಾಗೂ ಎದೆಗೆ ಗುದ್ದಿದ ಒಳ ಜಖಂ ಆಗಿದ್ದು ಹಾಗೂ ಸವಾರ ರವೀಂದ್ರರವರಿಗೆ ತಲೆಗೆ , ಬಲಕೈಗೆ ಹಾಗೂ ಬಲ ಕಾಲಿನ ಗಂಟಿಗೆ ರಕ್ತಗಾಯವಾಗಿದ್ದು ಹಾಗೂ ರಿಶ್ಯಾಂತ್‌ನಿಗೆ ಬಲ ಕೈ ಹಾಗೂ ಬಲ ಕಾಲಿಗೆ ತರಚಿದ ಗಾಯವಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ನಂತರ ಹೆಚ್ಚಿನ ಚಿಕಿತ್ಸೆಯ ಆದರ್ಶ ಆಸ್ಪತ್ರೆ ಉಡುಪಿಯಲ್ಲಿ ದಾಖಲು ಮಾಡಲಾಗಿದೆ .
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 88/2024 ಕಲಂ: 281, 125(a) BNS ರಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ

