ಕಾರ್ಕಳ

ಕಾರ್ಕಳ – ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿರುವ ಮೆಡಿಕಲ್ ಶಾಪ್‌ಗಳ ಪೊಲೀಸರಿಂದ ಪರಿಶೀಲನೆ

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಆದೇಶದಂತೆ ಕಾರ್ಕಳ ಹೆಬ್ರಿ ತಾಲೂಕಿನಲ್ಲಿರುವ ಮೆಡಿಕಲ್ ಶಾಪ್‌ಗಳನ್ನು ಪೊಲೀಸರು ಅ.01 ರಂದು ಪರಿಶೀಲಿಸುತ್ತಿದ್ದಾರೆ.

ಇತೀಚಿನ ದಿನಗಳಲ್ಲಿ ನಡೆಯುತ್ತಿರುವ ಔಷಧ ಮಾರಾಟದ ಬಗ್ಗೆ ಪ್ರಕರಣಗಳು ವರದಿಯಾಗುತ್ತಿರುವುದು ಈ ಬಗ್ಗೆ ಉಡುಪಿ ಜಿಲ್ಲೆಯಾದ್ಯಂತ ಎಲ್ಲಾ ಮೆಡಿಕಲ್ ಶಾಪ್‌ಗಳನ್ನು ಪರಿಶೀಲಿಸುವಂತೆ ಠಾಣಾ ವ್ಯಾಪ್ತಿಗೆ ಬರುವ ಮೆಡಿಕಲ್ ಶಾಪ್‌ಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಎಸ್‌ಪಿಯವರು ಆದೇಶಿಸಿದ್ದಾರೆ.

ಪೊಲೀಸರು ಮೆಡಿಕಲ್ ಶಾಪ್‌ಗೆ ತೆರಳಿ ಮೆಡಿಕಲ್‌ನ ಲೈಸೆನ್ಸ್ ಅವದಿ, ಸಿಸಿಟಿವಿ ಆಳವಡಿಕೆ, ಸಿಸಿಟಿವಿಯ ಸ್ಟೋರೇಜ್, ಸಿಸಿಟಿವಿಗಳ ಸಂಖ್ಯೆ ಹಾಗೂ ವೈದ್ಯರ ಚೀಟಿಯಿಲ್ಲದೆ ಮೆಡಿಸಿನ್‌ಗಳ ಮಾರಾಟವಾಗುತ್ತಿದೆಯೇ ಹಾಗೂ ಈ ಬಗ್ಗೆ ಮೆಡಿಕಲ್ ಶಾಪ್‌ನಲ್ಲಿ ನೋಟೀಸ್ ಅಳವಡಿಸಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಇದರೊಂದಿಗೆ ಮೆಡಿಕಲ್ ಶಾಪ್‌ಗಳಲ್ಲಿ ಮಾದಕ ವಸ್ತುಗಳ ಮಾರಾಟ ನಡೆಯುತ್ತಿದೆಯೇ ಹಾಗೂ ಅವಧಿ ಮುಗಿದ ಮೆಡಿಸಿನ್‌ಗಳನ್ನು ಗ್ರಾಹಕರಿಗೆ ವಿತರಿಸುತ್ತಿದ್ದಾರೆಯೇ ಎಂಬ ಬಗ್ಗೆಯೂ ಮೆಡಿಕಲ್ ಶಾಪ್‌ನಲ್ಲಿ ಪರಿಶೀಲಿಸಿ ಮೆಡಿಕಲ್‌ನ ಮಾಲಕರಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

Related posts

ಹೆಬ್ರಿ ಎಸ್.ಆರ್: ಚಿತ್ರಕಲಾ ಸ್ಪರ್ಧೆಯಲ್ಲಿ ಸಾನಿಧ್ಯ ಆಚಾರ್ಯ ಜಿಲ್ಲಾ ಮಟ್ಟಕ್ಕೆ

Madhyama Bimba

ಕಾರ್ಕಳ: ಅಕ್ರಮ ಮದ್ಯ ಮಾರಾಟ – ಪ್ರಕರಣ ದಾಖಲು

Madhyama Bimba

ಮಹಾಮಸ್ತಕಾಭಿಷೇಕಕ್ಕೆ ವಿಶೇಷ ಅನುದಾನ ಸೇರಿದಂತೆ ಕಾರ್ಕಳದ ಸಮಗ್ರ ಅಭಿವೃದ್ಧಿಗೆ ಹಲವು ಬೇಡಿಕೆಗಳು- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ಶಾಸಕ ವಿ. ಸುನಿಲ್ ಕುಮಾರ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More