ಪುತ್ತಿಗೆ ಗ್ರಾಮದ ನೆಲ್ಲಿಗುಡ್ಡೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುವ ಡಿಬಿಎಲ್ ಸಂಸ್ಥೆಯ ವಾಹನ ಕಾರ್ಮಿಕರೊಬ್ಬರಿಗೆ ಅದೇ ಸಂಸ್ಥೆಯ ವಾಹನ ಹರಿದು ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ನಡೆದಿದೆ.
ಅಪಘಾತದ ರಭಸಕ್ಕೆ ಕಾರ್ಮಿಕನ ಕಾಲು ಹಾಗೂ ಸೊಂಟದ ಭಾಗಗಳು ಸಂಪೂರ್ಣ ನುಜ್ಜುಗುಜ್ಜಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ನಡುವೆ ಪುತ್ತಿಗೆ, ತೆಂಕಮಿಜಾರು ಹಾಗೂ ಬೆಳುವಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಡಿಬಿಎಲ್ ಸಂಸ್ಥೆಯ ವಾಹನಗಳ ವೇಗದ ಸಂಚಾರ ಮತ್ತು ಅಸಮರ್ಪಕ ಕಾರ್ಯನಿರ್ವಹಣೆ ಕುರಿತು ಗ್ರಾಮಸ್ಥರು ಹಾಗೂ ಸಾರ್ವಜನಿಕರು ಈ ಹಿಂದೆ ಹಲವು ಬಾರಿ ದೂರುಗಳನ್ನು ನೀಡಿದ್ದರು.
