ಮೂಡುಬಿದಿರೆ

ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ‘ಪಶ್ಚಿಮ ಘಟ್ಟಗಳ ಸಸ್ಯ ವೈವಿಧ್ಯತೆ’ ಕುರಿತು ಜಾಗೃತಿ ಕಾರ್ಯಕ್ರಮ

ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಜೂ. 10ರಂದು ‘ಪಶ್ಚಿಮ ಘಟ್ಟಗಳ ಸಸ್ಯ ವೈವಿಧ್ಯತೆ’ ಕುರಿತು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳಲ್ಲಿ ಪರಿಸರ ಮತ್ತುಜೈವಿಕ ವೈವುಧ್ಯತೆಯ ಕುರಿತು ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು.

ಸಂಪನ್ಮೂಲ ವ್ಯಕ್ತಿ ಎಂ.ದಿನೇಶ್ ನಾಯಕ್ ಅವರು ನಾಗ ಸಂಪಿಗೆ, ಗುಲಗುಂಜಿ, ಕಾಗೆ ಮಾರಿ ಬಳ್ಳಿ, ಹೊಳೆ ದಾಸವಾಳ, ಅಗ್ನಿ, ಶಿಖೆ, ಅಮೃತ ಬಳ್ಳಿ, ಸೀತಾ ಅಶೋಕ ಸೇರಿದಂತೆ ಅಪರೂಪದ ಔಷಧೀಯ ಸಸ್ಯಗಳ ಮಹತ್ವ ಮತ್ತು ಪರಿಸರ ಸಮತೋಲನದಲ್ಲಿ ಅವುಗಳ ಪಾತ್ರವನ್ನು ವಿವರಿಸಿದರು. ಅರಣ್ಯ ನಾಶ ಹಾಗೂ ಹವಮಾನ ಬದಲಾವಣೆಯಿಂದ ಸಸ್ಯ ವೈವಿಧ್ಯತೆಗೆ ಉಂಟಾಗುವ ಅಪಾಯಗಳ ಬಗ್ಗೆಯೂ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ಇವರು ಮಾತಾನಾಡುತ್ತಾ ಪಶ್ಚಿಮ ಘಟ್ಟವು ಅತ್ಯಂತ ಅಧಿಕ ಸಂಖ್ಯೆಯ ವೈವಿಧ್ಯಮಯ ಸಸ್ಯ ಪ್ರಭೇದವನ್ನು ಹೊಂದಿದ್ದು, ಹೆಚ್ಚಿನ ಔಷಧೀಯ ಗುಣಗಳನ್ನು ಕೂಡ ಹೊಂದಿದೆ.ನಮ್ಮ ಸುತ್ತಲಿನ ಪರಿಸರದಲ್ಲಿರುವ ಇಂತಹ ಔಷಧೀಯ ಸಸ್ಯಗಳ ಬಗ್ಗೆಯೂ ಕೂಡ ನಾವು ತಿಳಿಯುವ ಪ್ರಯತ್ನವನ್ನು ಮಾಡಬೇಕು ಎಂದು ತಿಳಿಸಿದರು.

Related posts

ಮೂಡುಬಿದಿರೆ ಪತ್ರಕರ್ತರ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Madhyama Bimba

ಮೂಡುಬಿದಿರೆ: ಅಮೃತ ಸಭಾಭವನ ಉದ್ಘಾಟನೆ

Madhyama Bimba

ಯುವರಾಜ ಜೈನ ಅವರಿಗೆ ಸಿರಿಪುರ ಪ್ರಶಸ್ತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More