ಕಾರ್ಕಳ

ರಾಜ್ಯ ಅಥ್ಲೆಟಿಕ್ಸ್ ಕೂಟದಲ್ಲಿ ನಿಟ್ಟೆ ಕ್ರೀಡಾಪಟುಗಳ ಸಾಧನೆ

ಕಾರ್ಕಳ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಕೂಟದಲ್ಲಿ ನಿಟ್ಟೆ ಕ್ರೀಡಾಪಟುಗಳು ಸಾಧನೆಯನ್ನು ಮಾಡಿರುತ್ತಾರೆ.

ಎನ್‌ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಚಿರಾಗ್ ಪೂಜಾರಿ 200 ಮೀ ವಿಭಾಗದಲ್ಲಿ ಚಿನ್ನದ ಪದಕ ಮತ್ತು 100 ಮೀಟರ್, ಅಂಡರ್ -20 ವಿಭಾಗದಲ್ಲಿ ಬೆಳ್ಳಿ ಪದಕ, ಸ್ಥುತಿ ಪಿ. ಶೆಟ್ಟಿ ಹೊಸ ದಾಖಲೆಯೊಂದಿಗೆ (20 ವರ್ಷದೊಳಗಿನವರ ವಿಭಾಗದಲ್ಲಿ) 100 ಮೀ ಮತ್ತು 200 ಮೀ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಸಿನಾನ್ – ಹೈಜಂಪ್, ಅಂಡರ್ -20 ವಿಭಾಗದಲ್ಲಿ ಚಿನ್ನದ ಪದಕಗಳಿಸಿರುತ್ತಾರೆ.

ಡಾ. ಎನ್‌ಎಸ್‌ಎಎಂ ಪ್ರಥಮ ದರ್ಜೆ ಕಾಲೇಜಿನ ರಾಘವೇಂದ್ರ ಆರ್. ನಾಯಕ್ 20 ವರ್ಷದೊಳಗಿನವರ ವಿಭಾಗದ ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಪದಕ, ನಂದಿನಿ ಜಿ., 3000 ಮೀ, ಅಂಡರ್ -20 ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ಸಮೃದ್ಧಿ 1500 ಮೀ ಮತ್ತು 800 ಮೀ, ಅಂಡರ್ -20 ವಿಭಾಗದಲ್ಲಿ ಕಂಚಿನ ಪದಕಗಳು ಪಡೆದಿರುತ್ತಾರೆ.

ಡಾ.ಎನ್.ಎಸ್.ಎ.ಎಂ ಪಿಯು ಕಾಲೇಜಿನ ರಶ್ಮಿತಾ ಗಣಪತಿ ದೇವಾಡಿಗ – ಹೈಜಂಪ್, 18 ವರ್ಷದೊಳಗಿನವರ ವಿಭಾಗದಲ್ಲಿ ಕಂಚಿನ ಪದಕ ಹಾಗೂ ಡಾ.ಎನ್.ಎಸ್.ಎ.ಎಂ ಕನ್ನಡ ಮಾಧ್ಯಮ ಶಾಲೆಯ ಪ್ರಣಾಮ್ – ಜಾವೆಲಿನ್ ಎಸೆತ, 16 ವರ್ಷದೊಳಗಿನವರ ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ.

 

Related posts

ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ ಕ್ರಿಯೇಟಿವ್ ಪ್ರತಿಭಾ ಪರ್ವ ಕಾರ್ಯಕ್ರಮ: ನೀಟ್ ಸಾಧಕರಿಗೆ ಸನ್ಮಾನ

Madhyama Bimba

ವಿಕಾಸ ಉದ್ಯೋಗ ಸೇತು ಉದ್ಘಾಟನೆ

Madhyama Bimba

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಬೈಲೂರು- ಶಾಲಾ ನಾಯಕ ಹಾಗೂ ಉಪನಾಯಕನ ಆಯ್ಕೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More