ಮೂಡುಬಿದಿರೆ

ಏ ಜಿ ಸೋನ್ಸ್ ಐಟಿಐ ಪ್ರಾಂಶುಪಾಲರಾಗಿ ಶಿವಪ್ರಸಾದ್ ಹೆಗ್ಡೆ- ನವೆಂಬರ್ 1ರಿಂದ ಅಧಿಕಾರ ಸ್ವೀಕಾರ

ಮೂಡುಬಿದಿರೆ ಏ ಜಿ ಸೋನ್ಸ್ ಐಟಿಐ ಪ್ರಾಂಶುಪಾಲರಾಗಿ ಶಿವಪ್ರಸಾದ್ ಹೆಗ್ಡೆಯವರು ಪದೋನ್ನತಿ ಪಡೆದುಕೊಂಡಿದ್ದಾರೆ. ಈ ಸಂಸ್ಥೆಯಲ್ಲಿ 1990 ರಿಂದ ತರಬೇತಿ ಅಧಿಕಾರಿಯಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.

ಮೂಡುಬಿದಿರೆ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿಯೂ ಅವರು ಅಪಾರ ಸಮಾಜಮುಖಿ ಕಾರ್ಯ ನಡೆಸಿದ್ದಾರೆ. ಜಿಲ್ಲೆಯ ರಸ್ತೆ ಸುರಕ್ಷತಾ ವಿಭಾಗದ ಮುಖ್ಯ ಸಂಯೋಜಕರು, ಲಯನ್ಸ್ ಟ್ರಸ್ಟ್ ಅಧ್ಯಕ್ಷರಾಗಿ, ಬಂಟರ ಸಂಘದ ಪದಾಧಿಕಾರಿ, ಟೀಚೆರ್ಸ್ ಕೋ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷರಾಗಿ ಸೇವೆ ನೀಡಿದ್ದಾರೆ. ಧಾರ್ಮಿಕ ಸಂಘ ಸಂಸ್ಥೆ, ಶೈಕ್ಷಣಿಕ ಸಂಸ್ಥೆಗಳಲ್ಲಿ ಸೇವೆ ನೀಡಿದ್ದಾರೆ. ಚುನಾವಣಾ ಆಯೋಗ ನಡೆಸುವ ಚುನಾವಣೆಯಲ್ಲಿ ಮಾಸ್ಟರ್ ಟ್ರೈನರ್ ಆಗಿ ಆಸಕ್ತಿಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ನವೆಂಬರ್ 1ರಿಂದ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹಾಲಿ ಪ್ರಾಂಶುಪಾಲರಾಗಿರುವ ಶ್ರೀಕಾಂತ್ ಭಟ್ ಅವರು ನಿವೃತ್ತರಾಗಿದ್ದಾರೆ.

Related posts

ಡಾ. ಮೋಹನ್ ಆಳ್ವ ಹುಟ್ಟೂರ ಅಭಿನಂದನಾ ಸಮಾರಂಭದ ಪ್ರಥಮ ಪೂರ್ವಭಾವಿ ಸಭೆ – ಜಾತಿ ಧರ್ಮ ಮೀರಿ ಬೆಳೆದ ಶಕ್ತಿಗೆ ಗೌರವಾರ್ಪಣೆ ನಮ್ಮ ಭಾಗ್ಯ: ಒಕ್ಕೊರಲ ಅಭಿಪ್ರಾಯ

Madhyama Bimba

ಜವಾಹರ್ ಲಾಲ್ ನೆಹರು ಪ್ರೌಢಶಾಲೆ ವಿದ್ಯಾರ್ಥಿ ಬಸವರಾಜ್ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

Madhyama Bimba

ತಂತ್ರವೇ ಯಶಸ್ಸಿನ ಮೂಲ; ಕೇವಲ ಕಲ್ಪನೆಗಳಿಂದ ಉದ್ಯಮ ಯಶಸ್ವಿಯಾಗುವುದಿಲ್ಲ: ವೇಣು ಶರ್ಮಾ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More