ಮೂಡುಬಿದಿರೆ

ಡಾ. ಮೋಹನ್ ಆಳ್ವ ಹುಟ್ಟೂರ ಅಭಿನಂದನಾ ಸಮಾರಂಭದ ಪ್ರಥಮ ಪೂರ್ವಭಾವಿ ಸಭೆ – ಜಾತಿ ಧರ್ಮ ಮೀರಿ ಬೆಳೆದ ಶಕ್ತಿಗೆ ಗೌರವಾರ್ಪಣೆ ನಮ್ಮ ಭಾಗ್ಯ: ಒಕ್ಕೊರಲ ಅಭಿಪ್ರಾಯ

ಶಿಕ್ಷಣ ತಜ್ಞ, ಸಾಂಸ್ಕೃತಿಕ ರಾಯಭಾರಿ, ಮೂಡುಬಿದಿರೆಯ ನವ ನಿರ್ಮಾತೃ ಡಾ. ಎಂ. ಮೋಹನ್ ಆಳ್ವ ಅವರ 75 ವರ್ಷದ ಸಂಭ್ರಮದ ಅಂಗವಾಗಿ ಅಭಿನಂದನಾ ಸಮಾರಂಭದ ಪ್ರಥಮ ಪೂರ್ವಭಾವಿ ಸಭೆ ಕನ್ನಡ ಭವನದಲ್ಲಿ ಇಂದು ನಡೆಯಿತು.


ಶಾಸಕ ಉಮಾನಾಥ ಎ ಕೋಟ್ಯಾನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿ ಮೂಡುಬಿದಿರೆಯ ಜನರು ಸೇರಿ ಅವರ ಅಭಿನಂದನೆ ನಡೆಸಿ ಪ್ರತಿ ವರ್ಷ ಅವರ ಹೆಸರಿನಲ್ಲಿ ಕನ್ನಡ ಮಾಧ್ಯಮ ಶಾಲೆಗೆ ಕೊಡುಗೆ ನೀಡುವುದು, ಬಡವರ ಮಕ್ಕಳಿಗೆ ಸಹಾಯ ನೀಡುವುದು. ಮತ್ತು ಅವರ ಸಾಧನೆಯ ಕುರಿತು ಗ್ರಂಥವೊಂದನ್ನು ಪ್ರಕಟಿಸಲು ಯೋಜಿಸಿರುವುದಾಗಿ ತಿಳಿಸಿದರು.

ಮಾಜಿ ಸಚಿವ ಕೆ ಅಭಯಚಂದ್ರ ಅವರು ಮಾತನಾಡಿ ಕನ್ನಡ ಭವನದಲ್ಲಿ ಅಭಿನಂದನಾ ಸಭೆ ನಡೆಸುವಂತೆ ಸಲಹೆಯಿತ್ತರು. ತನ್ನ ದೇಣಿಗೆಯಾಗಿ ರೂ 1ಲಕ್ಷ ವನ್ನು ಘೋಷಿಸಿದರು.

ಉದ್ಯಮಿ ಶ್ರೀಪತಿ ಭಟ್, ನಾರಾಯಣ ಪಿ ಎಂ, ಚೌಟರ ಅರಮನೆ ಕುಲದೀಪ್ ಎಂ., ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಆಳ್ವಾಸ್ ಆಸ್ಪತ್ರೆ ಹಿರಿಯ ವೈದ್ಯ ಡಾ ಹರೀಶ್ ನಾಯಕ್, ಎಂಸಿಎಸ್ ಸೊಸೈಟಿ ಅಧ್ಯಕ್ಷ ಬಾಹುಬಲಿ ಪ್ರಸಾದ್, ರಾಜೇಶ್ವರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಉದ್ಯಮಿ ಜಯರಾಮ್ ಕೋಟ್ಯಾನ್, ನ್ಯಾಯವಾದಿ ಶ್ವೇತಾ ಜೈನ್, ಕೆಪಿ ಜಗದೀಶ್ ಅಧಿಕಾರಿ, ರೋಟರಿ ಟೆಂಪಲ್ ಟೌನ್ ಅಧ್ಯಕ್ಷ ಹರೀಶ್ ಎಂ ಕೆ, ಉದ್ಯಮಿ ಪೂರ್ಣ ಚಂದ್ರ ಜೈನ್, ಮಹೇಂದ್ರ ವರ್ಮ, ಅಶ್ವಿನ್ ಜೆ ಪಿರೇರಾ, ಅಬುಲ್ ಅಲಾ, ವಿಶ್ವನಾಥ್ ಕಾಮತ್ ಬೋಳ, ವೆಂಕಟರಮಣ ಹನುಮಂತ ದೇವಳಗಳ ಆಡಳಿತ ಮೊಕ್ತೇಸರ ಉಮೇಶ್ ಪೈ, ಡಾ ಮುರಳಿಕೃಷ್ಣ, ಪಡುಮಾರ್ನಾಡು ದಯಾನಂದ ಪೈ, ಪ್ರೆಸ್ ಕ್ಲಬ್ ಅಧ್ಯಕ್ಷ ಸೀತಾರಾಮ ಆಚಾರ್ಯ, ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಸಾಲ್ಯಾನ್, ದಿವಾಕರ್ ಬಂಗೇರ, ರಿಕ್ಷಾ ಯೂನಿಯನ್ ಅಧ್ಯಕ್ಷ ದೀಪಕ್ ರಾಜ್ , ರಾಜೇಶ್ ಸುವರ್ಣ, ರಾಹುಲ್ ಕುಲಾಲ್ ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

ಜಾತಿ ಮತ ಭೇದ ಮರೆತು ಸಮಾಜ ಸೇವೆ ಗೈದ ಮೋಹನ್ ಆಳ್ವರನ್ನು ಮೂಡುಬಿದಿರೆಯಲ್ಲಿ ಸಂಭ್ರಮದಿಂದ ಗುರುತಿಸಿ ಗೌರವಿಸೋಣ, ರಾಷ್ಟ್ರದ ಪದ್ಮ ಪ್ರಶಸ್ತಿಗಳಳೊಂದನ್ನು ಅವರಿಗೆ ನೀಡುವಲ್ಲಿ ಪ್ರಯತ್ನಿಸಬೇಕು. ಮೂಡುಬಿದಿರೆ ಜನರ ಭಾವನೆಗೆ ಒಪ್ಪುವ ಗೌರವ ಅವರಿಗೆ ಸಲ್ಲಿಕೆಯಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.ರಾಮಚಂದ್ರ ಮಿಜಾರು ಕಾರ್ಯಕ್ರಮದ ರೂಪುರೇಷಗಳನ್ನು ತಿಳಿಸಿ ಧನ್ಯವಾದವಿತ್ತರು.

Related posts

ಎಸ್ ಎಸ್ ಎಲ್ ಸಿ ಸಾಧಕಿಗೆ ಸನ್ಮಾನ

Madhyama Bimba

ಮೂಡುಬಿದಿರೆ ತಾಲೂಕು ಜನಜಾಗೃತಿ ವೇದಿಕೆ- ಅಧ್ಯಕ್ಷರಾಗಿ ಮಿತ್ತಬೈಲು ವಾಸುದೇವ ನಾಯಕ್

Madhyama Bimba

ನಿಸ್ವಾರ್ಥ ಜೀವನದ ಮೌಲ್ಯಗಳನ್ನು ಕಲಿಸಿದ ಶಿಕ್ಷಕರನ್ನು ಗೌರವಿಸಿ: ವಿವೇಕ್ ಆಳ್ವ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More