Blog

ಹಿರ್ಗಾನಕ್ಕೆ ಕೇಂದ್ರ ಸರಕಾರದ ಅಧಿಕಾರಿಗಳು ಭೇಟಿ

ರಾಷ್ಟೀಯ ಪಂಚಾಯತ್ ರಾಜ್ ಪುರಸ್ಕಾರಕ್ಕಾಗಿ ಅಂತಿಮ ಹಂತದ ದಾಖಲೆ ಪರಿಶೀಲನೆಯು ಹಿರ್ಗಾನ ಗ್ರಾಮದಲ್ಲಿ ಇಂದು ನಡೆಯಿತು.

ಈ ಬಗ್ಗೆ ನಡೆದ ಸಭೆಯಲ್ಲಿ ಆಶಾ ದೇವಿ ಸಹಾಯಕ ವಿಭಾಗ ಅಧಿಕಾರಿ ಪಂಚಾಯತ್ ರಾಜ್ ಮಂತ್ರಾಲಯ, ಭಾರತ ಸರಕಾರ ವಿದ್ಯುಲ್ಲತ, ಹಿರಿಯ ಕನ್ಸಲ್ಟೆಂಟ್ ಎನ್ ಐ ಆರ್ ಡಿ ಎನ್ ಪಿ ಆರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪ್ರತೀಕ್ ಬಾಯಲ್, ಉದಯ ಶೆಟ್ಟಿ, ಮುಖ್ಯ ಯೋಜನಾ ಅಧಿಕಾರಿಗಳು ಉಡುಪಿ

ಎಸ್ ಎಸ್ ಕಾದ್ರವಳ್ಳಿ, ಉಪ ಕಾರ್ಯದರ್ಶಿ ಜಿಲ್ಲಾ ಪಂಚಾಯತ್ ಉಡುಪಿ

ಪ್ರಶಾಂತ್ ರಾವ್ ಎಂ ವಿ. ಕಾರ್ಯ ನಿರ್ವಹಣಾ ಅಧಿಕಾರಿಗಳು, ಕೃಷ್ಣಾನಂದ ಸಹಾಯಕ ನಿರ್ದೇಶಕರು ತಾಲೂಕು ಪಂಚಾಯತ್

ರವಿಚಂದ್ರ ಕಾರಂತ್ ಆಡಳಿತ ಅಧಿಕಾರಿಗಳು

ಅಶೋಕ್ ಕುಮಾರ್ ಪಿ ಡಿ ಓ ಮತ್ತು ಹಲವಾರು ಅಧಿಕಾರಿಗಳು ಭಾಗವಹಿಸಿದ್ದರು.

ಸಭೆಯ ಬಳಿಕ ಗ್ರಾಮದಲ್ಲಿನ ಹಲವಾರು ಸರಕಾರಿ ಕಚೇರಿಗಳಿಗೆ ಅಧಿಕಾರಿಗಳು ಭೇಟಿ ನೀಡಿದರು.

ಸಾಮಾಜಿಕ ನ್ಯಾಯ ಹಾಗೂ ಭದ್ರತೆ ವಿಭಾಗದಿಂದ ಹಿರ್ಗಾನ ಗ್ರಾಮ ಪಂಚಾಯತನ್ನು ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಕ್ರಿಯೇಟಿವ್ ಕಾಲೇಜು ಉಪನ್ಯಾಸಕರಾದ ಶ್ರೀ ನಿಧಿ ನಾಯಕ್ ಕಾರ್ಯಕ್ರಮ ನಿರೂಪಣೆ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

Related posts

ಮೂಡಬಿದ್ರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೆಚ್ಚುವರಿಯಾಗಿ 50 ಬೆಡ್ಡುಗಳ ಶಿಫಾರಸ್ಸು-ಸರ್ಕಾರಕ್ಕೆ ಮಿಥುನ್ ರೈ ಅಭಿನಂದನೆ

Madhyama Bimba

ನವಮಿ ಟ್ರಾವೆಲ್ಸ್ ಲಕ್ಷ್ಮಣ್ ಇನ್ನಿಲ್ಲ

Madhyama Bimba

ತೆಳ್ಳಾರು ನಿವಾಸಿ ದಿನೇಶ್ ಪೂಜಾರಿ ಆತ್ಮಹತ್ಯೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More