ಜಿಲ್ಲೆಯ ಶ್ರೇಷ್ಠ ವೀರಗ್ರಾಣಿ ಪ್ರಶಸ್ತಿ ಪಡೆದ ಶಿರ್ಲಾಲಿನ ಪ್ರಣಾಮ್ ರಾಜ್ಯ ಮಟ್ಟಕ್ಕೆ ಆಯ್ಕೆ
ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಛೇರಿ ಉಡುಪಿ ಜಿಲ್ಲೆ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೊಕ್ಕರ್ಣೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ನಿಟ್ಟೆಯ ಡಾ. ಎನ್ . ಎಸ್. ಎ. ಎಂ ಕನ್ನಡ ಮಾಧ್ಯಮ ಪ್ರಾಡ ಶಾಲ ವಿದ್ಯಾರ್ಥಿಗಳು ಜಿಲ್ಲಾ ಕ್ರೀಡಾಕೂಟದಲ್ಲಿ 9 ಚಿನ್ನ ಹಾಗೂ 1 ಬೆಳ್ಳಿ ಪಡೆದುಕೊಂಡು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ
ಅದರಲ್ಲಿ ಶಿರ್ಲಾಲಿನ ಪ್ರಣಾಮ್ ನಾಯ್ಕ್ 100 ಮೀಟರ್ ಓಟ, 200 ಮೀಟರ್ ಓಟ, ಜಾವೆಲಿನ ಥ್ರೋ ದಲ್ಲಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿದ್ದರೆ,ಅಲ್ಲದೆ ಜಿಲ್ಲೆಯ ಶ್ರೇಷ್ಠ ವೀರಾಗ್ರಣಿ ಪ್ರಶಸ್ತಿ ಯನ್ನು ಪಡೆದುಕೊಂಡಿದ್ದಾರೆ.
ಪ್ರತಿಮಾ-ರಘುರಾಮ್ ನಾಯ್ಕ್ ಪುತ್ರನಾದ ಪ್ರಣಾಮ್ ಧೈಹಿಕ ಶಿಕ್ಷಕಿ ಉಷಾ ಹಾಗೂ ತರಬೇತು ದಾರರದ ನಿಟ್ಟೆಯ ಗಣೇಶ್ ಪೂಜಾರಿ ಇವರಿಂದ ತರಬೇತಿ ಪಡೆಯುತ್ತಿದ್ದಾರೆ
