Blog

ಹೆಬ್ರಿಯಲ್ಲಿ ಶಾರದಾ ಪೂಜೆ

ಹೆಬ್ರಿ ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿಯ ವತಿಯಿಂದ ಶೀಲಾ ಸುಭೋದ್ ಬಲ್ಲಾಳ್ ಬಂಟರ ಭವನದಲ್ಲಿ ನಡೆದ 14ನೇ ವರ್ಷದ 3 ದಿನಗಳ ಶಾರದಾ ಮಹೋತ್ಸವದ ಸಂಪನ್ನ ಕಾರ್ಯಕ್ರಮ ಶನಿವಾರ ನಡೆಯಿತು.

ಹೆಬ್ರಿಯಲ್ಲಿ ೧೪ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಂಪನ್ನ : ವೈಭವದ ಪುರ ಮೆರವಣಿಗೆ.

ಹೆಬ್ರಿ : ಹೆಬ್ರಿ ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿಯ ವತಿಯಿಂದ ಶೀಲಾ ಸುಭೋದ್ ಬಲ್ಲಾಳ್ ಬಂಟರ ಭವನದಲ್ಲಿ ನಡೆದ 14ನೇ ವರ್ಷದ 3 ದಿನಗಳ ಶಾರದಾ ಮಹೋತ್ಸವದ ಸಂಪನ್ನ ಕಾರ್ಯಕ್ರಮ ಶನಿವಾರ ನಡೆಯಿತು. ಅರ್ಚಕ ವೇದಮೂರ್ತಿ ಗಿಲ್ಲಾಳಿ ಪದ್ಮನಾಭ ಆಚಾರ್ಯ ಮಾತನಾಡಿ ಹೆಬ್ರಿಯ ಶಾರದೋತ್ಸವ ಅತಿಶಯದ ವೈಭವ. ಹತ್ತರಾರು ಕೈ ಮನಸ್ಸು ಒಂದಾದಾಗ ಕಾರ್ಯ ಯಶಸ್ವಿಯಾಗುತ್ತದೆ ಎಂಬುದಕ್ಕೆ ಹೆಬ್ರಿಯ ಶಾರದೋತ್ಸವ ಸಾಕ್ಷಿ ಎಂದರು.

ಮಹಾಪೂಜೆಯ ಬಳಿಕ ಚೆಂಡೆ, ಭಜನೆ, ಕಲಾ ತಂಡಗಳ ಆಕರ್ಷಕ ವೇಷಭೂಷಣಗಳ ಜೊತೆಗೆ ಶಾರದಾ ಮಾತೆಯ ಪುರಮೆರವಣಿಗೆ ನಡೆಯಿತು. ಹೆಬ್ರಿ ರಾಮ ಮಂಟಪದ ಬಳಿಯ ಕೆರೆಯಲ್ಲಿ ಜಲಸ್ಥಂಭನ ನಡೆಯಿತು.

ಹೆಬ್ರಿ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷ ಬೇಳಂಜೆ ಹರೀಶ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀದತ್ತ ಶೆಟ್ಟಿ, ಉಪಾಧ್ಯಕ್ಷ ಕೃಷ್ಣ ನಾಯ್ಕ್‌ ಚಾರ, ಪೂರ್ವಾಧ್ಯಕ್ಷರಾದ ಎಚ್.‌ ವಾದಿರಾಜ ಶೆಟ್ಟಿ, ನವೀನ್‌ ಕೆ ಅಡ್ಯಂತಾಯ, ಉಪಾಧ್ಯಕ್ಷ ಹರ್ಷ ಶೆಟ್ಟಿ, ಮಹಿಳಾ ವಿಭಾಗದ ಸುಮಾ ಎನ್‌ ಅಡ್ಯಂತಾಯ, ಸುಜಾತ ಹರೀಶ ಪೂಜಾರಿ, ಸುಕೇಶ ಶೆಟ್ಟಿ, ವಿಜಯ ಪೂಜಾರಿ, ಹೆಬ್ರಿ ಬಂಟರ ಸಂಘದ ಅಧ್ಯಕ್ಷ ಸೀತಾನದಿ ವಿಠ್ಠಲ ಶೆಟ್ಟಿ, ಸಮಿತಿಯ ಪದಾಧಿಕಾರಿಗಳು, ಉಪ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಹೆಬ್ರಿ ಟಿ.ಜಿ.ಆಚಾರ್ಯ ನಿರೂಪಿಸಿದರು. ಶ್ರೀದತ್ತ ಶೆಟ್ಟಿ ವಂದಿಸಿದರು. ಸೀತಾನದಿ ಶೋಧನ್‌ ಶೆಟ್ಟಿ ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು.

Related posts

ಶಾಸಕಿ ಭಾಗೀರಥಿ ಮುರುಳ್ಯರ ಮೇಲೆ ಫೇಸ್ಬುಕ್ ನಲ್ಲಿ ಅವಹೇಳನ

Madhyama Bimba

ಕಂಬಳದಲ್ಲಿ ಗುಣಪಾಲ ಕಡಂಬರ ಅವಹೇಳನ ಖಂಡನೀಯ- ಶುಭದರಾವ್

Madhyama Bimba

ಭಕ್ತಿ ವೆಂಕಟೇಶ್ ರಿಗೆ ಶಾರ್ಜಾದ ಪುರಸ್ಕಾರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More