ಕಾರ್ಕಳಹೆಬ್ರಿ

ಅಶಕ್ತ ಕುಟುಂಬಕ್ಕೆ ನೂತನ ಗ್ರಹ ನಿರ್ಮಾಣದ ಆಸರೆ: ಜಿಎಸ್‌ಬಿ ಸಮಾಜ ಹಿತ ರಕ್ಷಣಾ ವೇದಿಕೆಯ ಮಾದರಿ ಕಾರ್ಯ

ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆ ಉಡುಪಿ ಜಿಲ್ಲೆ ಇವರ ನೇತೃತ್ವದಲ್ಲಿ ಸಮಾಜದ ದಾನಿಗಳ ಸಹಕಾರದಿಂದ ಜಿಎಸ್‌ಬಿ ಸೇವಾ ಸಂಘ ಸಾಹೇಬರಕಟ್ಟೆ ಶಿರಿಯಾರ ಪರಿಸರದ ಆರ್ಥಿಕವಾಗಿ ಹಿಂದುಳಿದ ನಾಗೇಶ ಪ್ರಭು ಕಾಜರಳ್ಳಿ ಯವರಿಗೆ ಕಟ್ಟಿಸಿ ಕೊಡುತ್ತಿರುವ ನೂತನ ಮನೆಯ ಭೂಮಿ ಪೂಜನ ಕಾರ್ಯಕ್ರಮವು ಅ. 3ರಂದು ನಡೆಯಿತು.


ಬಸ್ರೂರು ಶ್ರೀ ಗೋಕರ್ಣ ಮಠದ ಪುರೋಹಿತರಾದ ವೇದಮೂರ್ತಿ ಮಹೇಶ್ ಭಟ್ ರವರು ಭೂಮಿ ಪೂಜೆ ಶಿಲಾನ್ಯಾಸ ದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.


ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಜಿ.ಸತೀಶ್ ಹೆಗಡೆ ಕೋಟ, ಸಂಚಾಲಕರಾದ ಆರ್.ವಿವೇಕಾನಂದ ಶೆಣೈ ಕಾರ್ಕಳ ಹಾಗೂ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಉಪಸ್ಥಿತರಿದ್ದು ಮಾಹಿತಿ, ಮಾರ್ಗದರ್ಶನ ನೀಡಿದರು.


ಸಾಹೇಬರ ಕಟ್ಟೆ ಸಿರಿಯಾರ ಜಿಎಸ್‌ಬಿ ಸೇವಾ ಸಂಘದ ಪ್ರಮುಖರುಗಳಾದ ಮಧುವನ ಮಾಧವ ಹೆಗಡೆ, ಅಶೋಕ ಪ್ರಭು, ಮಧುವನ ಗಣೇಶ್ ನಾಯಕ್, ರವೀಂದ್ರನಾಥ ಕಿಣಿ, ಮಹೇಶ ಶೆಣೈ ಗಾವಳಿ, ರವಿಪ್ರಕಾಶ ಪ್ರಭು ಗಾವಳಿ, ವಿಶ್ವನಾಥ ಶಾನ್ ಬಾಗ್, ಶಿವಾನಂದ ಶಾನುಭಾಗ್, ಕೃಷ್ಣಮೂರ್ತಿ ಕಾಮತ್ ಎಡ್ತಾಡಿ, ನಿತ್ಯಾನಂದ ಪೈ ಕಾಜರಳ್ಳಿ, ಸುಭಾಷ್ ಪ್ರಭು ಕಾಜರಹಳ್ಳಿ, ಸುರೇಶ್ ಮಲ್ಯ, ಸಾಹೇಬರಕಟ್ಟೆ, ಶ್ರೀಮತಿ ಪ್ರಮೀಳಾ ಪ್ರಭು , ಶ್ರೀಮತಿ ಯಶೋದ ಮಲ್ಯ, ಶ್ರೀಮತಿ ಕಾವ್ಯ ಹೆಗಡೆ, ಶ್ರೀಮತಿ ಚಂದ್ರಕಲಾ ಪೈ, ಶ್ರೀಮತಿ ಸವಿತಾ ಪ್ರಭು, ಶ್ರೀಮತಿ ವಿದ್ಯಾ ಶಾನುಭಾಗ್, ಸಂಪತ್ ನಾಯಕ್, ಪಿ. ವಿದ್ಯಾನಂದ ಶರ್ಮ ಕಾರ್ಕಳ, ಸಿದ್ದಾಪುರ ವಾಸುದೇವ ಪೈ ಉಡುಪಿ, ದಾನಿಗಳಾದ ರಾಧಾಕೃಷ್ಣ ನಾಯಕ್ ಕೋಟ, ಶ್ರೀಮತಿ ವೈಜಯಂತಿ ಕಾಮತ್, ಅನಂತ ಪೈ ಹಾಗೂ ಶ್ರೀಮತಿ ಕಲ್ಪನಾ ಅನಂತಪೈ ಈ ಸಂದರ್ಭದಲ್ಲಿದ್ದರು.


ಗ್ರಹ ನಿರ್ಮಾಣ ಕಾರ್ಯಕ್ಕೆ ಸರ್ಕಾರದಿಂದ ಉಚಿತ ನಿವೇಶನವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿ, ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸುತ್ತಿರುವ ಸ್ಥಳೀಯ ಸಾಮಾಜಿಕ ಮುಂದಾಳುಗಳಾದ ಪ್ರದೀಪ್ ಬಲ್ಲಾಳರವರನ್ನು ಜಿಎಸ್ ಬಿ ಸಮಾಜದ ವತಿಯಿಂದ ಗೌರವಿಸಲಾಯಿತು.

ಅಕ್ಟೋಬರ್ 3 ಗೃಹ ನಿರ್ಮಾಣದ ಭೂಮಿ ಪೂಜೆಯ ದಿನದಿಂದ ಮುಂದಿನ 92 ದಿನಗಳ ಒಳಗಾಗಿ(ಜನವರಿ 17-2024)ದಾಖಲೆ ಅವಧಿಯಲ್ಲಿ ಸುಮಾರು 12 ಲಕ್ಷಗಳ ಅಂದಾಜು ವೆಚ್ಚದಲ್ಲಿ ಗ್ರಹ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುವಲ್ಲಿ ಸಮಾಜ ಬಾಂಧವರ, ಹಿತೈಷಿ ದಾನಿಗಳ ಸಂಪೂರ್ಣ ಸಹಕಾರವನ್ನು ನಿರೀಕ್ಷಿಸಲಾಗಿದೆ ಎಂದು ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಆರ್. ವಿವೇಕಾನಂದ ಶೆಣೈ, ಗ್ರಹ ನಿರ್ಮಾಣ ಯೋಜನೆಯ ನೇತೃತ್ವವನ್ನು ವಹಿಸಿರುವ ಮಧುವನ ಮಾಧವ ಹೆಗಡೆ ಮತ್ತು ಅಶೋಕ್ ಪ್ರಭು ಸಾಹೇಬರಕಟ್ಟೆ ಶಿರಿಯಾರರವರು ತಿಳಿಸಿದರು.

Related posts

ಪೆರ್ವಾಜೆ ಉಮಾನಾಥ ಪ್ರಭು ನಿಧನ

Madhyama Bimba

ಮುಡಾ ಹಗರಣದಿಂದ ಜನತೆಯ ಗಮನವನ್ನು ಬೇರೆಡೆಗೊಯ್ಯಲು ಸಿ.ಎಂ. ಸಿದ್ದರಾಮಯ್ಯ ಕುಮ್ಮಕ್ಕು, ಜಮೀರ್ ಅಹ್ಮದ್ ’ಲ್ಯಾಂಡ್ ಜಿಹಾದ್’ ಷಡ್ಯಂತ್ರ : ಕಿಶೋರ್ ಕುಮಾರ್ ಕುಂದಾಪುರ

Madhyama Bimba

ಬೆಳ್ಮಣ್ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಫೋಟೋಗ್ರಾಫಿ ತರಬೇತಿ ಕಾರ್ಯಗಾರ.

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More