ಕಾರ್ಕಳಹೆಬ್ರಿ

ಮುದ್ರಾಡಿ ಸೇವಾ ಸಂಗಮ ಶಿಶುಮಂದಿರ ರಜತ ಮಹೋತ್ಸವ ಸಮಿತಿಯಿಂದ ವಿಜ್ಞಾಪನಾ ಪತ್ರ ಬಿಡುಗಡೆ

ಹೆಬ್ರಿ :ಮುದ್ರಾಡಿ ಸುಬ್ಬಣ್ಣ ಕಟ್ಟೆ ಸೇವಾ ಸಂಗಮ ಶಿಶುಮಂದಿರದ ರಜತ ಮಹೋತ್ಸವ ಸಮಿತಿಯಿಂದ ವಿಜ್ಞಾಪನಾ ಪತ್ರ ಬಿಡುಗಡೆಯು ಮುದ್ರಾಡಿ ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿ ಜ. 31 ರಂದು ನಡೆಯಿತು.

ಕಾರ್ಕಳ ತಾಲೂಕಿನ, ಹೆಬ್ರಿ ಭಾಗದಲ್ಲಿ ಸ್ಥಾಪನೆಯಾದ ಮೊಟ್ಟ ಮೊದಲ ಶಿಶುಮಂದಿರವೆಂಬ ಹೆಗ್ಗಳಿಕೆಯನ್ನು ಹೊಂದಿರುವ ಈ ವಿದ್ಯಾಮಂದಿರವು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಿಂತನೆಗಳಿಂದ ಪ್ರೇರಿತವಾಗಿ ಬಾಲ್ಯದಲ್ಲೇ ಸಂಸ್ಕಾರ ಎಂಬ ತತ್ವವನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಶಿಶುಮಂದಿರಕ್ಕೆ 25 ವರ್ಷ ಪೂರೈಸಿದ ಸವಿ ನೆನೆಪಿಗಾಗಿ ರಜತಮಹೋತ್ಸವ ಆಚರಿಸಬೇಕೆಂಬ ಸಂಕಲ್ಪ ದೊಂದಿಗೆ ಪುಟಾಣಿಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುವ ಚಿಂತನೆ ಮಾಡಿಕೊಂಡು ಸರ್ವರಿಂದಲೂ ಸರ್ವ ವಿಧದ ಸಹಕಾರಕ್ಕಾಗಿ ದೇವರಲ್ಲಿ ಪ್ರಾರ್ಥಿಸಿ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಲಾಯಿತು.

ರಜತ ಮಹೋತ್ಸವ ಸಮಿತಿ ಗೌರವಾಧ್ಯಕ್ಷರಾದ ವಿದ್ವಾನ್ ಪದ್ಮನಾಭ ಆಚಾರ್ಯ ವಿಜ್ಞಾಪನಾ ಪತ್ರ ವನ್ನು ಬಿಡುಗಡೆಗೊಳಿಸಿ ಮಾತನಾಡಿ ಶಿಶು ಮಂದಿರ ದ ವ್ಯವಸ್ಥಾಪಕರ ಸಂಕಲ್ಪದಂತೆ ಶಿಶುಮಂದಿರದ ಬೆಳವಣಿಗೆಗಾಗಿ, ಸಂಸ್ಕಾರಯುತ ಪೀಳಿಗೆಯ ನಿರ್ಮಾಣಕ್ಕಾಗಿ ಎಲ್ಲರ ಸಹಕಾರವು ಹರಿದು ಬರಲಿ . ರಜತ ಮಹೋತ್ಸವ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ರಜತ ಮಹೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀಧರ್ ಹೆಬ್ಬಾರ್ ಕಾಪೋಳಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಮುದ್ರಾಡಿ ಗ್ರಾಮ ಪಂಚಾಯತ್ ಹಿರಿಯ ಸದಸ್ಯರು, ಸಮಿತಿಯ ಗೌರವ ಸಲಹೆಗಾರರಾದ ಗಣಪತಿ. ಎಂ ಮಾತನಾಡಿ ಎಲ್ಲರೂ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ದೇಣಿಗೆ ನೀಡಿ ಸಹಕರಿಸಲು ವಿನಂತಿಸಿಕೊಂಡರು.ಶಿಶು ಮಂದಿರದ ರಜತ ಮಹೋತ್ಸವ ಮೂಲಕ ಎಲ್ಲರ ಮನೆ ಮನಗಳಲ್ಲಿ ಸಂಸ್ಕಾರ ಶಿಕ್ಷಣದ ಅರಿವು ಮೂಡಿಸುವ ಕಾರ್ಯವನ್ನು ಎಲ್ಲರೂ ಒಗ್ಗಟ್ಟಾಗಿ ಮಾಡುವ ಪ್ರಯತ್ನವನ್ನು ಮಾಡೋಣ ಎಂದು ಹೇಳಿದರು.

ಶಿಶು ಮಂದಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ, ವ್ಯವಸ್ಥಾಪಕಿ ಶಿಲ್ಪಾ ಶ್ರೀಧರ್ ನಾಯಕ್, ಸಂತೋಷ ಕುಮಾರ್ ಶೆಟ್ಟಿ,ಉಮೇಶ್ ಪೈ, ಗುರುಪ್ರಸಾದ್ ಹೆಗ್ಡೆ ಕೊಳಂಬೆ, ಉಷಾ ಪೈ, ಅರುಣ ರಾವ್ ನೆಲ್ಲಿಕಟ್ಟೆ, ರವಿ ಪೂಜಾರಿ ಪಾದೆಮನೆ, ಶ್ರೀಧರ ಪೂಜಾರಿ ಕಾನ್ಗುಂಡಿ,ಅಶ್ವಿನಿ ಉಜೂರು ಮೊದಲಾದವರು ಉಪಸ್ಥಿತರಿದ್ದರು.

ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿ ದರು. ಸೇವಾಸಂಗಮ ಶಿಶು ಮಂದಿರದ ಸಂಚಾಲಕರಾದ ಶ್ರೀಧರ್ ನಾಯಕ್ ವಂದಿಸಿದರು.

Related posts

ವಲಯ ಮಟ್ಟದ ಕ್ರೀಡಾಕೂಟ: ರೋಟರಿ ಕ್ಲಬ್ ಕಾರ್ಕಳ ಚಾಂಪಿಯನ್

Madhyama Bimba

ಮುದ್ರಾಡಿಯಲ್ಲಿ ನೇತಾಜಿ ಪ್ರತಿಮೆಗೆ ನಮನ

Madhyama Bimba

ಪರಶುರಾಮ ಪ್ರತಿಮೆಯ ಸೊಂಟದ ಮೇಲ್ಬಾಗದ ಕಳ್ಳತನವೇ ಉಳಿದ ಬಿಡಿಭಾಗಗಳ ಕಳ್ಳತನಕ್ಕೆ ಪ್ರೇರಣೆ: ಈ ದುಸ್ಥಿತಿಗೆ ಶಾಸಕ ಸುನೀಲ್ ಕುಮಾರ್ ನೇರ ಹೊಣೆ- ಉದಯ ಶೆಟ್ಟಿ ಮುನಿಯಾಲು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More