Blog

ಕರಾವಳಿ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡಿದ ಕೇಂದ್ರ ಬಜೆಟ್



ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಕರಾವಳಿ ಜಿಲ್ಲೆಗಳಿಗೆ ನಿರಾಸೆಯನ್ನು ಉಂಟು ಮಾಡಿದೆ ಎಂದು ಕಾರ್ಕಳ ಕಾಂಗ್ರೆಸ್ ಮುಖಂಡರಾದ ಉದಯ ಶೆಟ್ಟಿ ಮುನಿಯಾಲು ಅಭಿಪ್ರಾಯಪಟ್ಟಿದ್ದಾರೆ.

ಇದೊಂದು ಚುನಾವಣಾ ಬಜೆಟ್ ಆಗಿದ್ದು ಬಿಜೆಪಿ ಅಧಿಕಾರವಿಲ್ಲದ ರಾಜ್ಯಗಳಲ್ಲಿ ಪಕ್ಷ ಬಲವವರ್ದನೆಗಾಗಿಯೇ ಮಂಡಿಸಿರುವ ಬಜೆಟಿನಂತಿದೆ, ಈ ಬಜೆಟ್,ನಿಂದ ಜನ ಸಾಮಾನ್ಯರಿಗೆ ಯಾವುದೇ ಪ್ರಯೋಜನವೂ ಇಲ್ಲ. ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಬಿಜೆಪಿ ಸಂಸದರೇ ಇದ್ದರು ಕರಾವಳಿಯ ನೈಜ ಸಮಸ್ಯೆಗಳನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡುವಲ್ಲಿ ಅವರು ಎಡವಿದ್ದಾರೆ, ಜನತೆಯ ಬೇಕು ಬೇಡಗಳಿಗೆ ಸ್ಪಂದಿಸಿ ಅತ್ಯುತ್ತಮ ಬಜೆಟ್ ನೀಡಬೇಕಾಗಿದ್ದ ಕೇಂದ್ರ ಸರ್ಕಾರವು  ಕೇವಲ ತನ್ನ ಪಕ್ಷದ ಚುನಾವಣಾ ಬಜೆಟನ್ನು ನೀಡಿದೆ.
ಜನತೆಯ ಹಿತದೃಷ್ಟಿಯಿಂದ ಇದು ನಿರಾಸದಾಯಕ ಬಜೆಟ್ ಎಂದು ಉದಯ ಶೆಟ್ಟಿ ಮುನಿಯಾಲು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Related posts

ಸಹಕಾರ ನೀಡಿದ ಪರಸ್ಪರ ಸೇವಾ ಟ್ರಸ್ಟ್

Madhyama Bimba

ದ್ವೇಷದ ಬರಹ – ನಿಟ್ಟೆಯ ಸುಧಾಕರ ಮೇಲೆ ಕೇಸು ದಾಖಲು

Madhyama Bimba

ಜಿಲ್ಲೆಯಲ್ಲಿ ರೈತ ಸಂಘದ ಬಲವರ್ಧನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More