ಹೆಬ್ರಿ: ಹೆಬ್ರಿಯ ಶೇಖರ (77) ಎಂಬವರಿಗೆ ಇವರ ಮೊಬೈಲ್ ಗೆ ಕೆವೈಸಿ ಅಪ್‌ಲೋಡ್ ಎಸ್‌ಎಮ್‌ಎಸ್ ಬಂದಿದ್ದು ದಿನಾಂಕ 07-11-2024ರಂದು ಎಸ್‌ಎಮ್‌ಎಸ್‌ನಲ್ಲಿದ್ದ ನಂಬ್ರಕ್ಕೆ ಕಾಲ್ ಮಾಡಿದಾಗ ಕೆನರಾ ಬ್ಯಾಂಕ್‌ನವರು ಎಂದು ಹೇಳಿ ನಿಮ್ಮ ಕೆವೈಸಿ ಅಪ್‌ಡೇಟ್ ಆಗದೆ ಇದ್ದು ಅಕೌಂಟ್ ಬ್ಲಾಕ್ ಮಾಡುವುದಾಗಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಶೇಖರ್‌ರವರು ಅಕೌಂಟ್ ನಂಬ್ರ ಹೆಸರು ವಿಳಾಸ ಹಾಗೂ ಎಟಿಎಮ್ ಕಾರ್ಡ್‌ನ ಕೊನೆಯ ನಾಲ್ಕು ನಂಬ್ರವನ್ನು ಅವರಿಗೆ ಕೊಟ್ಟಿದ್ದಾರೆ. ಮಾಹಿತಿ ಅಪ್‌ಲೋಡ್ ಆದ ನಂತರ ಓಟಿಪಿ ಬರುವುದಾಗಿ ತಿಳಿಸಿ ನಂತರ ಸ್ವಲ್ಪ ಸಮಯದಲ್ಲಿ ಕರೆ ಮಾಡಿ ಓಟಿಪಿ ಕೇಳಿ ಪಡೆದುಕೊಂಡಿದ್ದಾರೆ.
ಬಳಿಕ ೧೫ ನಿಮಿಷಗಳ ನಂತರ ಪುನಃ ಕರೆ ಮಾಡಿ ಕನ್ನಡ ಬಾಷೆಯಲ್ಲಿ ಮಹಿಳೆ ಮಾತನಾಡಿ ಕೆನರಾ ಬ್ಯಾಂಕ್‌ನಿಂದ ಮಾತನಾಡುತ್ತಿರುವುದಾಗಿ ತಿಳಿಸಿ ನಿಮ್ಮ ಅಕೌಂಟ್‌ನಿಂದ 51,908/- ರೂಪಾಯಿ ಹಣ ಕಟ್ಟಾಗಿರುವುದಾಗಿ ನೀವು 1930 ಕರೆ ಮಾಡುವಂತೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗಲಿಬಿಲಿಗೊಂಡ ಶೇಖರ್‌ರವರು ಬ್ಯಾಂಕ್‌ಗೆ ಹೋಗಿ ವಿಚಾರಿಸಲಾಗಿ ಖಾತೆಯಿಂದ 51908/- ಡ್ರಾ ಆಗಿದ್ದು ಯಾರೋ ಅಪರಿಚಿತ ವ್ಯಕ್ತಿ ಮೋಸ ಮಾಡಿ ಅಕ್ರಮವಾಗಿ ಹಣ ಡ್ರಾ ಮಾಡಿದ ಬಗ್ಗೆ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.