ಹೆಬ್ರಿ: ಮುದ್ರಾಡಿಯಲ್ಲಿ ನಡೆದ ಐದನೆ ವರ್ಷದ ಶಾರದೋತ್ಸವ ಕಾರ್ಯಕ್ರಮ ಚೆನ್ನಾಗಿ ಮೂಡಿಬಂದಿದೆ. ಸಮಿತಿಯ ಪದಾಧಿಕಾರಿಗಳು, ವಿವಿಧ ಉಪಸಮಿತಿಗಳ ಸಂಚಾಲಕರು ಮತ್ತು ಸರ್ವಸದಸ್ಯರು, ಮುದ್ರಾಡಿ ಕಬ್ಬಿನಾಲೆ ಗ್ರಾಮದ ವಿವಿಧ ಸಂಘಸಂಸ್ಥೆಗಳು, ಶಾಲಾ ಕಾಲೇಜು ಮುಖ್ಯಸ್ಥರು ಮತ್ತು ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿರುತ್ತಾರೆ. ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಲು ಸಹಕರಿಸಿದ ಎಲ್ಲರಿಗೂ ಮತ್ತು ಊರ ಪರವೂರ ದಾನಿಗಳಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಮುದ್ರಾಡಿಯು ಚಿಕ್ಕ ಗ್ರಾಮವಾದರೂ ಹೃದಯ ಶ್ರೀಮಂತಿಕೆಯುಳ್ಳ ಉದಾರ ಮನಸ್ಸಿನ ಜನರು ಇರುವುದೇ ಇದಕ್ಕೆಲ್ಲ ಕಾರಣ ಎಂದು ಮುದ್ರಾಡಿ ಸಾರ್ವಜನಿಕ ಶಾರದೋತ್ಸವ ಸಮಿತಿ ಅಧ್ಯಕ್ಷ ಎಂ. ಮಂಜುನಾಥ ಪೂಜಾರಿ ತಿಳಿಸಿದರು.
ಸಮಿತಿ ಉಪಾಧ್ಯಕ್ಷ ಕಬ್ಬಿನಾಲೆ ಚಂದ್ರಶೇಖರ ಬಾಯರಿ, ಗೌರವ ಸಲಹೆಗಾರರಾದ ಗಣಪತಿ ಎಂ., ಸಂತೋಷ್ ಕುಮಾರ್ ಶೆಟ್ಟಿ, ಸಮಿತಿಗಳ ಸಂಚಾಲಕರಾದ ಸನತ್ ಕುಮಾರ್ ಮುದ್ರಾಡಿ, ಸಂತೋಷ ಪೂಜಾರಿ ನೆಕ್ಕಾರ್ ಬೆಟ್ಟು, ಶಿವಾನಂದ ಶೆಟ್ಟಿ, ಸುಧೀರ್ ಆಚಾರ್ಯ, ಸತೀಶ್ ಸೇರಿಗಾರ ಬೆಳಗುಂಡಿ, ಶುಭಧರ್ ಶೆಟ್ಟಿ, ಕೃಷ್ಣ ಶೆಟ್ಟಿಗಾರ್, ಮಹೇಶ್ ಕಾನ್ ಗುಂಡಿ, ಕಾರ್ಯದರ್ಶಿ ವಿಶು ಕುಮಾರ್ ಉಪ್ಪಳ, ಜತೆ ಕಾರ್ಯದರ್ಶಿ ಅಣ್ಣಪ್ಪ ಮುದ್ರಾಡಿ ಮತ್ತು ಸರ್ವಸದಸ್ಯರು ಉಪಸ್ಥಿತರಿದ್ದರು.
ಕೋಶಾಧಿಕಾರಿ ಬಲ್ಲಾಡಿ ಚಂದ್ರಶೇಖರ ಭಟ್ ಲೆಕ್ಕಪತ್ರ ಮಂಡಿಸಿದರು. ಪ್ರಕಾಶ್ ಪೂಜಾರಿ ಮಾತಿಬೆಟ್ಟು ಸ್ವಾಗತಿಸಿ, ವಂದಿಸಿದರು.