ಸಹ್ಯಾದ್ರಿ ಸಮುದಾಯ ಅಭಿವೃದ್ದಿ ಮತ್ತು ಮಹಿಳಾ ಸಬಲೀಕರಣ ಸಂಘ, ಶಿರಸಿ, ಜಿಲ್ಲಾ ಪಂಚಾಯತ್ ಉಡುಪಿ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಯೋಗದಲ್ಲಿ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳದ ಯುವ ರೆಡ್ ಕ್ರಾಸ್ ಘಟಕದ 2024-25 ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದ ನೆಲೆಯಲ್ಲಿ ನೀರು ಮತು ನೈರ್ಮಲ್ಯ ವಸ್ತು ಪ್ರದರ್ಶನವನ್ನು ಆಯೋಜಿಸಲಾಯಿತು.
ಸಭಾ ಕಾರ್ಯಕ್ರಮದ ಉದ್ಘಾಟಕರು ಹಾಗೂ ಮುಖ್ಯ ಅತಿಥಿಯಾಗಿ ರಾಜ್ಯ ಸಂಪನ್ಮೂಲ ವ್ಯಕ್ತಿ ಹಾಗೂ ವಾಟರ್ ರಿಚಾರ್ಜಿಂಗ್ ತಜ್ಞರಾದ ಜೊಸೆಫ್ ರೆಬೆಲ್ಲೊ ಅವರು ದೀಪವನ್ನು ಬೆಳಗಿಸಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡ ಕಾರ್ಕಳ ಜಿ.ಎಫ್. ಜಿ.ಸಿ ಸಂಸ್ಥೆಯ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತ ಪಡಿಸಿದರು. ಯುವಕರು ಸಮಾಜ ಸೇವಾ ಕೇಂದ್ರಿತರಾಗಬೇಕು ಮತು ನಮ್ಮ ಸಮಾಜದ ಅಮೂಲ್ಯವಾದ ಜಲಸಂಪನ್ಮೂಲವನ್ನು ಸಂರಕ್ಷಿಸುವಲ್ಲಿ ತೊಡಗಬೇಕೆಂದರು. ತಮ್ಮ ಭಾಷಣದಲ್ಲಿ ಜಲ ಮತ್ತು ನೈರ್ಮಲ್ಯದ ವಿಚಾರವನ್ನು ಸ್ವಯಂಸೇವಕರಿಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಇಸ್ರಾ ಸಮುದಾಯ ಸಂಘಟಕರಾದ ಶ್ರೀಧರ ಗೌಡ ಇವರು ಪ್ರಾಸ್ತಾವಿಕ ನುಡಿಯಲ್ಲಿ ಜಲ ಜೀವನ್ ಮಿಷನ್ ಕುರಿತು ಮಾಹಿತಿಯನ್ನು ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ್ ರೈ ಕೆ. ಇವರು ರೆಡ್ ಕ್ರಾಸ್ ಸೊಸೈಟಿಯ ಐತಿಹಾಸಿಕ ವಿಕಸನದ ಕುರಿತು ತಿಳುವಳಿಕೆ ನೀಡಿದರಲ್ಲದೇ ವಿದ್ಯಾರ್ಥಿಗಳು ಈ ಕಲಿಕೆಯ ಪಯಣದಲ್ಲಿ ಆಂತರಿಕ ಅಂಕಗಳು ಅಥವಾ ಮನ್ನಣೆಯ ಬೆನ್ನತ್ತದೆ ಉತ್ತಮ ಮಾನವರಾಗಲು ರೆಡ್ ಕ್ರಾಸ್ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಬೇಕೆಂದು ಪ್ರೋತ್ಸಾಹಿಸಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸ್ವಯಂಸೇವಕರಿಗೆ ತಮ್ಮ ಹಿತನುಡಿಗಳ ಮೂಲಕ ತಿಳಿಸಿದರು.
ವೇದಿಕೆ ಯಲ್ಲಿ ಸಮಾಜ ಸೇವಕಿ ಹಾಗೂ ಜಲ್ಲಾ ಸಂಪನ್ಮೂಲ ವ್ಯಕ್ತಿಯಾದ ಶುಭಾಶ್ರೀ, ಕಾರ್ಕಳ ತಾಲೂಕಿನ ಏಈ ಶ್ರೀ ಪ್ರಭು , ಯುವರೆಡ್ ಕ್ರಾಸ್ ಘಟಕದ ಸಂಚಾಲಕಿ ಡಾ. ದಿವ್ಯ ಪ್ರಭು, ನಾಯಕಿಯರಾದ ದೀಕ್ಷಾ ಹಾಗೂ ಸ್ನೇಹ ಇವರು ಉಪಸ್ಥಿತರಿದ್ದರು. ಪ್ರಾಧ್ಯಾಪಕರಾದ ಡಾ. ಸುದರ್ಶನ್ ಪಿ., ರೆಡ್ ಕ್ರಾಸ್ ಸಮಿತಿಯ ಸದಸ್ಯರಾದ ಡಾ. ಚಂದ್ರಕಾಂತ್ ಶೆಣೈ, ಡಾ. ಜಯಭಾರತಿ ಎ, ಪ್ರೊ. ಮೈತ್ರಿ ಬಿ ಇವರು ಉಪಸ್ಥಿತರಿದ್ದರು.
ವಿಧ್ಯಾರ್ಧಿನಿಯರಾದ ಸಂಧ್ಯಾ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಶ್ವಿನಿ ಮತ್ತು ತಂಡದವರು ಪ್ರಾರ್ಥಿಸಿ, ಕುಮಾರಿ ದಿವ್ಯಾ ಧನ್ಯವಾದ ಸಮರ್ಪಿಸಿದರು.
ಸಭಾ ಕಾರ್ಯಕ್ರಮದ ನಂತರ ವಸ್ತು ಪ್ರದರ್ಶನವನ್ನು ಕಾಲೇಜಿನ ಎಲ್ಲಾ ವಿಧ್ಯಾರ್ಥಿಗಳಿಗೆ ಪ್ರದರ್ಶಿಸಲಾಯಿತು.