ಪಳ್ಳಿಗೆ ಸರಕಾರಿ ಬಸ್ಸು, ರಾಜ್ಯ ಸಾರಿಗೆ ಇಲಾಖೆ ಒದಗಿಸುವುದರಿಂದ,
ಪಳ್ಳಿ – ನಿಂಜೂರು ಹಾಗು ಆಸುಪಾಸಿನ ಗ್ರಾಮಸ್ಥರು ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಸರಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣದ ಸೌಲಭ್ಯ ಸದುಪಯೋಗವನ್ನು ಪಡೆಯಬಹುದು ಎಂದು ಎನ್ ಎಸ್ ಯು ಐ ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ ಕೃತಜ್ಞತೆ ಸಲ್ಲಿಸಿದ್ದಾರೆ
ಇದು ಒಂದು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜನಪರ ಕಾರ್ಯಕ್ರಮ. ಇದು ಊರಿನ ಗ್ರಾಮಸ್ಥರ ಸರಕಾರಿ ಬಸ್ಸು ಬರುವ ಹಲವಾರು ವರ್ಷದ ಕನಸು ನನಸಾಗುವಂತಾಯಿತು. ಇದಕ್ಕೋಸ್ಕರ ರಾಜ್ಯ ಸರ್ಕಾರಕ್ಕೆ, ಮುಖ್ಯಮಂತ್ರಿ ಹಾಗು ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರಿಗೆ ಹಾಗು ಸಾರಿಗೆ ಇಲಾಖೆ, ಸಾರಿಗೆ ಅಧಿಕಾರ ವರ್ಗದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮೆಲ್ಲರ ಹಾಗು ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಇದಕ್ಕೆ ಶ್ರಮಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಸಂಸದರಾದ ಮಾನ್ಯ ಶ್ರೀ ಜಯ ಪ್ರಕಾಶ್ ಹೆಗ್ಡೆ , ವಿಧಾನ ಪರಿಷತ್ ಸದಸ್ಯರಾದ ಮಾನ್ಯ ಶ್ರೀ ಮಂಜುನಾಥ ಭಂಡಾರಿ ಹಾಗು ಕಾಂಗ್ರೆಸ್ ನಾಯಕರಾದ ಮಾನ್ಯ ಶ್ರೀ ಉದಯ ಕುಮಾರ್ ಶೆಟ್ಟಿ ಮುನಿಯಾಲು ಹಾಗು ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದವನ್ನು ಸಲ್ಲಿಸುತ್ತೇನೆ.
ಇನ್ನೂ ಆದಷ್ಟು ಬೇಗ ಉಡುಪಿ- ಮೂಡುಬೆಳ್ಳೆ-ಪಳ್ಳಿ ಕುಂಟಾಡಿ-ಅತ್ತೂರು ಮಾರ್ಗವಾಗಿ ಕಾರ್ಕಳಕ್ಕೆ ಸರಕಾರಿ ಬಸ್ಸು ಪ್ರಾರಂಭಿಸಬೇಕು. ಇದರಿಂದ ಕಲ್ಕಾರ್, ಕೈರಬೆಟ್ಟು, ಕುಂಟಾಡಿ, ಕಲ್ಯ , ಅತ್ತೂರು, ಕಾಬೆಟ್ಟು ಪರಿಸರದ ಮಹಿಳೆಯರಿಗೆ ಹಾಗು ವಿದ್ಯಾರ್ಥಿನಿಯರಿಗೆ ಕೂಡ ಅನುಕೂಲವಾಗುತ್ತದೆ. ಇದರ ಬಗ್ಗೆ ಸಾರಿಗೆ ಸಚಿವರು ಮತ್ತು ಸಾರಿಗೆ ಇಲಾಖೆ ಗಮನ ಹರಿಸಬೇಕು ಎಂದು ಅವರು ಹೇಳಿದ್ದಾರೆ .