ಮೂಡುಬಿದಿರೆ: ಇದೇ ಬರುವ ಡಿಸೆಂಬರ್ 10 ಮಂಗಳವಾರದಿಂದ 15ನೇ ಭಾನುವಾರದವರೆಗೆ ಅನ್ವೇಷಣಾತ್ಮಕ ಕೃಷಿಕ, ಶತಾಯುಷಿ, ಮಿಜಾರುಗುತ್ತು ಆನಂದ ಆಳ್ವರ ಸ್ಮರಣಾರ್ಥ ಆರು ದಿನಗಳ ರೈತರ ಸಂತೆ ಮತ್ತು ಕೃಷಿಮೇಳವು ಪ್ಯಾಲೇಸ್‌ಗ್ರೌಂಡ್‌ನಲ್ಲಿ ನಡೆಯಲಿದೆ. ಹಾಗೆಯೇ ಆಹಾರೋತ್ಸವ-ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಹಾಮೇಳವನ್ನು ಮುಂಡ್ರುದೆಗುತ್ತು ಕೆ.ಅಮರನಾಥ ಶೆಟ್ಟಿ (ಕೃಷಿಸಿರಿ ವೇದಿಕೆ) ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಮಹಾಮೇಳದಲ್ಲಿ ಭಾಗವಹಿಸಿ ಮಳಿಗೆ ತೆರೆಯಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಹಾರೋತ್ಸವ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಲ್ಲಿ ಸಸ್ಯಾಹಾರ-ಮಾಂಸಾಹಾರ ಖಾದ್ಯಗಳು, ಫಾಸ್ಟ್‌ಫುಡ್ ಹಾಗೂ ವೈವಿಧ್ಯಮಯ ಪಾನೀಯಗಳಿಗೆ ಸಂಬಂಧಿಸಿದ ಸಿದ್ಧ ಮತ್ತು ಸ್ಥಳದಲ್ಲೇ ತಯಾರಿಸಿ ನೀಡುವ ಆಹಾರ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಕೃಷಿಗೆ ಸಂಬಂಧಿಸಿದ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಲ್ಲಿ ಹಣ್ಣು, ತರಕಾರಿ, ಹೂವು ಬೀಜಗಳ ಮಾರಾಟ, ನರ್ಸರಿಗಳು, ಸಾವಯವ-ರಾಸಾಯನಿಕ ಗೊಬ್ಬರಗಳು, ನೀರು-ನೆಲಗಳಲ್ಲಿ ಬೆಳೆಯುವ ವೈವಿಧ್ಯಮಯ ಹೂಗಿಡಗಳು, ಕೃಷಿ ಉಪಕರಣ-ಯಂತ್ರಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಈ ಬಾರಿಯ ಪ್ರಮುಖ ಆಕರ್ಷಣೆ ಎಂದರೆ “ರೈತರ ಸಂತೆ”. ಈ ರೈತರ ಸಂತೆಯಲ್ಲಿ ಭಾಗವಹಿಸಲು ಇಚ್ಚಿಸುವ ರೈತರು ಮೊದಲೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳತಕ್ಕದ್ದು. ಮೊದಲು ಬಂದವರಿಗೆ ಮೊದಲ ಆದ್ಯತೆ.
ರೈತರೇ ನೇರವಾಗಿ ತಾವು ಬೆಳೆದ ತರಕಾರಿ, ಹಣ್ಣು ಪುಷ್ಪಗಳನ್ನು ಗ್ರಾಹಕರಿಗೆ ಮಾರಾಟ ಮಾಡಬಹುದಾಗಿದೆ.
ಹಾಗೆಯೇ ಕರಕುಶಲ ವಸ್ತುಗಳಾದಂತಹ ಸೆರಾಮಿಕ್ಸ್ ಮತ್ತು ಗಾಜಿನ ವಸ್ತುಗಳು, ಫೈಬರ್ ಮತ್ತು ಜವಳಿ ಕರಕುಶಲ ವಸ್ತುಗಳು, ಹೂವಿನ ಕರಕುಶಲ ವಸ್ತುಗಳು, ಚರ್ಮದ ಕರಕುಶಲ ವಸ್ತುಗಳು, ಗೃಹಪಯೋಗಿ ವಸ್ತುಗಳ ಪ್ರದರ್ಶನಕ್ಕೆ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.
ಆಹಾರ ಮತ್ತು ಕರಕುಶಲ ಮೇಳದ ಮಾರಾಟ ಮತ್ತು ಪ್ರದರ್ಶನ ಕೃಷಿಸಿರಿ ವೇದಿಕೆಯಲ್ಲಿ ನಡೆಯಲಿದೆ. ಒಟ್ಟಾರೆ ಈ ಮಹಾಮೇಳದಲ್ಲಿ 500 ರಿಂದ 600 ಮಳಿಗೆಗಳನ್ನು ತೆರೆಯಲು ಅವಕಾಶವಿದ್ದು, ಆಸಕ್ತ ವ್ಯಾಪಾರಿಗಳು ಮಳಿಗೆಗಳನ್ನು ಅದಷ್ಟು ಬೇಗ ನೊಂದಾಯಿಸಿಕೊಳ್ಳಲು ವಿನಂತಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – ನರ್ಸರಿ ಮಳಿಗೆಗೆ : ಡಾ. ಕೆ. ವಿ. ಸುರೇಶ್ 9880496920, ಡಾ. ರಾಹುಲ್ ಫಾಟಕ್ 8197025728 ಡಾ. ಶಶಿಕುಮಾರ್ 9113019074, ಆಹಾರ ಮತ್ತು ಕರಕುಶಲ ಮಳಿಗೆಗೆ : ಶ್ರೀ ನಾರಾಯಣ – 8197487197, ಮಹೇಶ – 8050499626