ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಜೈನ ಪೇಟೆ ತಿರುವು ಬಳಿ ಹಾಕಲಾದ ಡಾಮಾರು ದುರಸ್ಥಿ ಕಾಮಗಾರಿ ಮಳೆಯ ಕಾರಣಕ್ಕೆ ಹಾಳಾಗಿ ಜಲ್ಲಿ ಚೆಲ್ಲಾಪಿಲ್ಲಿಯಾಗಿರುವುದನ್ನು ಪುರಸಭಾ ಉಪಾಧ್ಯಕ್ಷ ನಾಗರಾಜ್ ಪೂಜಾರಿಯವರು ತುರ್ತು ದುರಸ್ಥಿ ನಡೆಸಿ ಪರಿಹಾರ ರೂಪಿಸಿದ್ದಾರೆ.
ಮಾಧ್ಯಮದವರು ಈ ರಸ್ತೆಯಲ್ಲಿ ಜಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ನಾಗರಾಜ್ ಪೂಜಾರಿಯವರ ಗಮನ ಸೆಳೆದಿದ್ದರು. ಕೂಡಲೇ ಸ್ಪಂದಿಸಿದ ಅವರು ತುರ್ತಾಗಿ ದುರಸ್ತಿ ಪಡಿಸಿ ಅಪಾಯಕ್ಕೆ ಕಡಿವಾಣ ಹಾಕಿದ್ದಾರೆ.