ಮೂಡುಬಿದಿರೆ

ಮೂಡುಬಿದಿರೆಯಲ್ಲಿ ಸಮಾಜ ಮಂದಿರ, ಯುವವಾಹಿನಿಯಿಂದ ಬೆದ್ರ ಗೂಡುದೀಪ ಮತ್ತು ರಂಗೋಲಿ

ಮೂಡುಬಿದಿರೆ ಸಮಾಜ ಮಂದಿರ ಸಭಾ (ರಿ.) ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಘಟನೆ ಯುವವಾಹಿನಿ (ರಿ)ಯ ಮೂಡುಬಿದಿರೆ ಘಟಕ ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಸಂಭ್ರಮಕ್ಕಾಗಿ ಸಾರ್ವಜನಿಕರಿಗಾಗಿ 3ನೇ ವರ್ಷದ  ಬೆದ್ರ ಗೂಡುದೀಪ ಮತ್ತು ರಂಗೋಲಿ ಸ್ಪರ್ಧೆ-2024 ಸಮಾಜ ಮಂದಿರದಲ್ಲಿ ಸಂಪನ್ನಗೊಂಡಿತು.


ಮಾಜಿ ಸಚಿವ, ಸಮಾಜ ಮಂದಿರ ಸಭಾ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಮಾಜ ಮಂದಿರ ಮತ್ತು ಯುವವಾಹಿನಿ ಘಟಕವು ಗೂಡು ದೀಪ ಮತ್ತು ರಂಗೋಲಿ ಸ್ಪರ್ಧೆಯನ್ನು ಆಯೋಜಿಸಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಿದೆ ಎಂದು ಹೇಳಿ ಶುಭ ಹಾರೈಸಿದರು.


ಎಸ್.ಎನ್. ಮೂಡುಬಿದಿರೆ ಪಾಲಿಟೆಕ್ನಿಕ್ ನ ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ವಿಭಾಗದ ಉಪನ್ಯಾಸಕ ಡಾ.ಎಸ್. ಪಿ. ಗುರುದಾಸ್ ದೀಪಾವಳಿಯ ಸಂದೇಶ ನೀಡಿದರು.


ಯುವವಾಹಿನಿ ಘಟಕದ ಅಧ್ಯಕ್ಷ ಶಂಕರ್ ಎ.ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಹಿಂದೆ ಹಬ್ಬಗಳನ್ನು ಆಚರಿಸುವ ಸಂದರ್ಭದಲ್ಲಿ ಸಂಸ್ಕೃತಿ, ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಮುಂಚಿತವಾಗಿ ಹಬ್ಬದ ತಯಾರಿ ನಡೆಯುತ್ತಿತ್ತು ಆಗ ರೆಡಿಮೆಡ್ ವಸ್ತುಗಳಿಗೆ ಹಂಚಿ ತಿನ್ನುವ ಗುಣಗಳೂ ನಮ್ಮಲ್ಲಿದ್ದವು. ಇದನ್ನು ಉಳಿಸುವ ನಿಟ್ಟಿನಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಿ ದೀಪಾವಳಿಯ ಸಂದೇಶಗಳನ್ನು ನೀಡಲಾಗುತ್ತಿದೆ. ಯುವವಾಹಿನಿ ಘಟಕವು ಈ ಬಾರಿ ವಿವಿಧ ರೀತಿಯ 48 ಕಾರ್ಯಕ್ರಮಗಳನ್ನು ಸಂಘಟಿಸಿದೆ ಇದು ತಮ್ಮ ಘಟಕಕ್ಕೆ ಹೆಮ್ಮೆ ಎಂದರು.


ಸನ್ಮಾನ : ವಿವಿಧ ಕಡೆಗಳಲ್ಲಿ ನಡೆದ ಛದ್ಮವೇಶ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನವನ್ನು ಪಡೆದಿರುವ ಬಾಲಪ್ರತಿಭೆ ಆಧ್ಯಾ ವಿ.ಕೋಟ್ಯಾನ್ ಅಲಂಗಾರು ಅವರನ್ನು ಸನ್ಮಾನಿಸಲಾಯಿತು.


ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್, ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ, ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ನ ಅಧ್ಯಕ್ಷ ಪೂರ್ಣಚಂದ್ರ ಜೈನ್, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಬಿಂದಿಯ ಶರತ್ ಡಿ.ಶೆಟ್ಟಿ, ಪವರ್ ಫ್ರೆಂಡ್ಸ್ ಬೆದ್ರದ ಅಧ್ಯಕ್ಷ ವಿನಯ ಕುಮಾರ್, ಉದ್ಯಮಿ ನಾಗರಾಜ ಹೆಗ್ಗಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.


ಸಮಾಜ ಮಂದಿರ ಸಭಾದ ಜೊತೆ ಕಾರ್ಯದರ್ಶಿ ಎಂ ಗಣೇಶ್ ಕಾಮತ್ ಸ್ವಾಗತಿಸಿದರು. ಯುವವಾಹಿನಿ ಘಟಕದ ಮಾಜಿ ಅದ್ಯಕ್ಷ ನವಾನಂದ ವಿಜೇತರ ವಿವರ ನೀಡಿದರು. ಪ್ರೊ.ಹರೀಶ್ ಕಾಪಿಕಾಡ್ ಗುರುರಾಜ್ ಅವರನ್ನು ಪರಿಚಯಿಸಿದರು. ಸಂಪತ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಗಿರೀಶ್ ಕೋಟ್ಯಾನ್ ವಂದಿಸಿದರು.


ಗೂಡುದೀಪ ಸ್ಪರ್ಧೆಯ ಫಲಿತಾಂಶ :
ಸಾಂಪ್ರದಾಯಿಕ ವಿಭಾಗ : ರಕ್ಷಿತ್ ಕುಮಾರ್ ಮಂಗಳೂರು (ಪ್ರಥಮ), ಆದಿತ್ಯ ಗುರುಪುರ (ದ್ವಿತೀಯ), ಸುಚಂದ್ರ ಕುಮಾರ್ (ತೃತೀಯ).
ಆಧುನಿಕ ವಿಭಾಗ : ವಿಠ್ಠಲ್ ಭಟ್ ಕಾರ್ ಸ್ಟ್ರೀಟ್ ಮಂಗಳೂರು (ಪ್ರಥಮ), ಜಗದೀಶ್ ಅಮೀನ್ ಸುಂಕದಕಟ್ಟೆ ಮಂಗಳೂರು (ದ್ವಿತೀಯ), ಬೋಜ ಮಾರ್ನಾಡ್ (ತೃತೀಯ).
ಮಾದರಿ ವಿಭಾಗ : ರಂಜಿತ್ & ಅನಿರುದ್ಧ್ ಬಸವನಕಜೆ ಮೂಡುಬಿದಿರೆ (ಪ್ರಥಮ), ಕಿಶೋರ್ ಪಡುಮಾರ್ನಾಡು ( ದ್ವಿತೀಯ) ಹಾಗೂ ಯತೀಶ್ ಆಚಾರ್ಯ ಮಾಸ್ತಿಕಟ್ಟೆ ತೃತೀಯ.
ರಂಗೋಲಿ ಸ್ಪರ್ಧೆಯ ಫಲಿತಾಂಶ : ಶ್ರಾವ್ಯ ಎಸ್. ಆಚಾರ್ಯ, ಜೈನ್ ಪಿ.ಯು.ಕಾಲೇಜು ಮೂಡುಬಿದಿರೆ (ಪ್ರಥಮ), ಕೋಕಿಲ ಮಹಾವೀರ ಕಾಲೇಜು (ದ್ವಿತೀಯ) ಮತ್ತು ವಿದ್ಯಾಶ್ರೀ ಸುರೇಶ್ ತೃತೀಯ ಬಹುಮಾನ ವನ್ನು ಪಡೆದುಕೊಂಡಿದ್ದಾರೆ.
ಸಮಾಧಾನಕರ ಬಹುಮಾನ : ಮಹಾವೀರ ಕಾಲೇಜಿನ ಸೌಮ್ಯ, ಶ್ರೇಯ ಮತ್ತು ಅನುಷಾ ನಾಯಕ್ ಪಡೆದುಕೊಂಡಿದ್ದಾರೆ.

 

Related posts

ಪರಿಸರ ಹಾಗೂ ಆರೋಗ್ಯಕ್ಕೆ ಪೂರಕವಾಗುವ ಕೃಷಿ: ರಾಜೇಂದ್ರ ಕುಮಾರ್

Madhyama Bimba

ಮೂಡುಬಿದಿರೆಯಲ್ಲಿ ಗೂಡುದೀಪ, ರಂಗೋಲಿ ಸ್ಪರ್ಧೆ

Madhyama Bimba

ಶಿರ್ತಾಡಿ ಬಿಲ್ಲವ ಸಂಘದಿಂದ ಪೊಲೀಸ್ ದೂರು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More