ಕಾರ್ಕಳಹೆಬ್ರಿ

ರಾಜ್ಯ ಮಟ್ಟದ ರೆಡ್‌ಕ್ರಾಸ್ ಪರೀಕ್ಷೆಗೆ ಆಹ್ವಾನ

ರಾಜ್ಯ ರೆಡ್‌ಕ್ರಾಸ್ ಸಂಸ್ಥೆಯ ವತಿಯಿಂದ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಡಿಸೆಂಬರ್ 28 ರಂದು ರಾಜ್ಯ ಮಟ್ಟದ ರೆಡ್‌ಕ್ರಾಸ್ ಪರೀಕ್ಷೆಯನ್ನು ನಡೆಸಲಾಗುವುದು.


ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಪುಸ್ತಕ ಶುಲ್ಕ ಇಪ್ಪತ್ತೈದು, ಪರೀಕ್ಷಾ ಶುಲ್ಕ ನಲ್ವತ್ತು ರೂಪಾಯಿ ಸೇರಿದಂತೆ ಒಟ್ಟು ಅರುವತ್ತೈದು ರೂಪಾಯಿಗಳ ಶುಲ್ಕ ನೀಡಬೇಕು. ಪರೀಕ್ಷೆಗಳು ಆಯಾಯ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯಲಿದೆ. ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳನ್ನು ಒದಗಿಸಲಾಗುವುದು. ಪರೀಕ್ಷೆಯು ನೂರು ಅಂಕದ ಬಹುಆಯ್ಕೆ ಮತ್ತು ಲಿಖಿತ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

ವಿವರಗಳಿಗೆ www.redcrosskarnataka.org ಇದರ ಜೂನಿಯರ್ ರೆಡ್ ಕ್ರಾಸ್ ಪೇಜಿನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಹೆಚ್ಚಿನ ವಿವರಗಳಿಗೆ ರಾಜ್ಯ ಘಟಕದ ಕಿರಿಯ ರೆಡ್‌ಕ್ರಾಸ್ ವಿಭಾಗದ ಹರೀಶ್ ಎಮ್ – ಮೊ.ನಂ: 9632140642 ಅಥವಾ ಜಿಲ್ಲಾ ರೆಡ್‌ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಮೊಬೈಲ್ ಸಂಖ್ಯೆ: 9964583433 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Related posts

ಕಾರ್ಕಳ: ಪಾದಚಾರಿಗೆ ಕಾರು ಡಿಕ್ಕಿ- ಗಾಯ

Madhyama Bimba

ನಿಟ್ಟೆ ಬಳಿ ಕಾರು ಹಿಂದಿನಿಂದ ಸ್ಕೂಟರ್‌ಗೆ ಡಿಕ್ಕಿ: ಗಾಯ

Madhyama Bimba

ಕಾರ್ಕಳ ಪುರಸಭಾ ಸದಸ್ಯನಿಂದ ಹಲ್ಲೆ: ಗಂಭೀರ ಸ್ವರೂಪದ ಗಾಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More