ಭಾರತ ಸಂಸ್ಕೃತಿ ಪ್ರತಿಷ್ಠಾನ ರಿ. ಬೆಂಗಳೂರು ಇವರು ನಡೆಸಲ್ಪಡುವ ರಾಮಾಯಣ ಮಹಾಭಾರತ ಪರೀಕ್ಷೆಯನ್ನು ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಒಟ್ಟು 205 ವಿದ್ಯಾರ್ಥಿಗಳು ಬರೆದರು.
ನಮ್ಮ ಭಾರತೀಯ ಪರಂಪರೆಯ ಶ್ರೇಷ್ಠ ಗ್ರಂಥಗಳಾದ ರಾಮಾಯಣ ಮಹಾಭಾರತದ ಅಧ್ಯಯನವನ್ನು ಮಾಡಬೇಕು ಎಂಬ ಸದಾಶಯವನ್ನು ಪ್ರತಿಷ್ಠಾನವು ಹೊಂದಿದೆ.
ಪರೀಕ್ಷಾ ಸಂಯೋಜಕ ವೇದವ್ಯಾಸ ತಂತ್ರಿ ಮಡಾಮಕ್ಕಿ ಮತ್ತು ಸಂಸ್ಥೆಯ ಶಿಕ್ಷಕರಾದ ಸಾವಿತ್ರಿ ಕಿಣಿ, ಸೌಪರ್ಣಿಕಾ ಜೋಶಿ, ಪಂಚಮಿ, ಸುಮನವಾಣಿ, ಸುಮನ್, ಮೀನಾಕ್ಷಿ, ಸುಚಿತ್ರಾ, ನಿಶಾನ್ ಇವರೆಲ್ಲರೂ ಪರೀಕ್ಷೆ ನಡೆಯಲು ಸಹಕರಿಸಿದರು.