ಕಾರ್ಕಳದಲ್ಲಿ ಪುರಸಭಾ ಸದಸ್ಯ ಸೀತಾರಾಮ್ ರನ್ನು ಮಹಾಬಲ ಮೂಲ್ಯ ರ ಮೇಲೆ ಬಡಿಗೆಯಲ್ಲಿ ಮಾಡಿರುವ ಹಲ್ಲೆ ಪ್ರಕರಣದಲ್ಲಿ ಕಾರ್ಕಳ ಪೊಲೀಸರು ಕ್ಷಿಪ್ರ ಗತಿಯಲ್ಲಿ ಬಂಧನ ಮಾಡಿದ್ದಾರೆ.
ಸೀತಾರಾಮರು ದೊಣ್ಣೆಯಲ್ಲಿ ಹೊಡೆದ ಹೊಡೆತಕ್ಕೆ ಮಹಾಬಲ ಮೂಲ್ಯರ ಕಾಲು ತುಂಡಾಗಿತ್ತು
ಕುಲಾಲ ಯುವ ವೇದಿಕೆ ಆಕ್ರೋಶ
ಈ ಘಟನೆಯನ್ನು ಕಂಡ ಕುಲಾಲ ಯುವ ವೇದಿಕೆ ಈ ಘಟನೆ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿ ಇಂದು ಕಾರ್ಕಳ ಪೊಲೀಸ್ ಠಾಣೆಯಲ್ಲಿ ಡಿ ವೈ ಎಸ್ ಪಿ ಅರವಿಂದ ಕಲಗುಜ್ಜಿ, ನಗರ ಠಾಣಾ ಎಸ್ ಐ ಸಂದೀಪ್ ಶೆಟ್ಟಿಯವರಿಗೆ ಈ ಬಗ್ಗೆ ಕ್ರಮ ಕೈ ಗೊಳ್ಳುವಂತೆ ಮನವಿ ಮಾಡಿತ್ತು
.
ಕುಲಾಲ ಯುವ ವೇದಿಕೆಯ ಜಿಲ್ಲಾಧ್ಯಕ್ಷ ದಿವಾಕರ ಬಂಗೇರ, ಕಾರ್ಕಳ ಕುಲಾಲ ಸಂಘದ ಅಧ್ಯಕ್ಷ ಹರೀಶ್ಚಂದ್ರ ಕುಲಾಲ್, ಕುಲಾಲ ಯುವ ವೇದಿಕೆ ತಾಲೂಕು ಅಧ್ಯಕ್ಷ ಉದಯ ಕುಲಾಲ್ ಹೆರ್ಮುಂಡೆ ಕುಲಾಲ್ ಸಂಘದ ಕಾರ್ಯದರ್ಶಿ ಹೃದಯ ಕುಲಾಲ್, ಹೆಬ್ರಿ ಕುಲಾಲ ಸಂಘದ ಅಧ್ಯಕ್ಷ ಸುರೇಂದ್ರ ಕುಲಾಲ್ ವರಂಗ, ಕಾರ್ಕಳ ಕುಲಾಲ ಯುವ ವೇದಿಕೆಯ ಕಾರ್ಯದರ್ಶಿ ಸಂದೇಶ್, ಮತ್ತಿತರ ಯುವ ವೇದಿಕೆ ಸದಸ್ಯರು ಮನವಿ ಮಾಡಿದ್ದರು
ಪೋಲಿಸರ ಕ್ಷಿಪ್ರ ಕಾರ್ಯಾಚರಣೆ
ಕುಲಾಲ ಯುವ ವೇದಿಕೆಯ ಮನವಿಗೆ ತಕ್ಷಣ ಸ್ಪಂದನೆ ಮಾಡಿದ ಪೊಲೀಸ್ ಇಲಾಖೆ ಸೀತಾರಾಮರನ್ನು ಮನವಿ ನೀಡಿದ ಬಳಿಕ ಒಂದೇ ಘಂಟೆಯಲ್ಲಿ ಬಂಧನ ಮಾಡಿದೆ.
ಪೊಲೀಸರ ಈ ಕ್ಷಿಪ್ರ ಗತಿಯ ಕ್ರಮ ಸಾಮಾಜಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ
next post