Blog

ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸ್ಪಂದನೆ ಮಾಡಿದ ಅಧಿಕಾರಿಗಳಿಗೆ ಸನ್ಮಾನ

ಮುದ್ರಾಡಿ : ಪ್ರಕೃತಿ ವಿಕೋಪ ಸ್ಪಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರಿಂದ ಸನ್ಮಾನ.


ಮುದ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದಿನಾಂಕ 06-04-2024 ರಂದು  ಮೇಘ ಸ್ಪೋಟವಾಗಿ ಪ್ರಕೃತಿ ವಿಕೋಪವಾದ ಸಂದರ್ಭದಲ್ಲಿ  ಸ್ಪಂದಿಸಿದ ಮುದ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಕಂದಾಯ ಇಲಾಖೆ, ಪೋಲಿಸ್ ಇಲಾಖೆ ಹಾಗೂ ಇತರ ಇಲಾಖೆಗಳ ಅಧಿಕಾರಿಗಳಿಗೆ ಮುದ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರಿಂದ ಸನ್ಮಾನ ಕಾರ್ಯಕ್ರಮವನ್ನು  ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಸಂತಿ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಯಾಗಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ವಿ ಸುನಿಲ್ ಕುಮಾರ್ ಇವರು ಉಪಸ್ಥಿತರಿದ್ದು, ಎಲ್ಲರನ್ನು ಗ್ರಾಮಸ್ಥರ ಪರವಾಗಿ ಸನ್ಮಾನ ಮಾಡಿದರು.

ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ  ಪರವಾಗಿ   ಕಂದಾಯ ನಿರೀಕ್ಷಕರಾದ ಶ್ರೀ ಹಿತೇಶ್, ಗ್ರಾಮ ಕರಣಿಕರಾದ  ಶ್ರೀನವಿನ್ ಕುಮಾರ್ ಹಾಗೂ ಶ್ರೀ ಗಣೇಶ್ ಕುಲಾಲ್, ಪೊಲೀಸ್ ಇಲಾಖೆಯ ಪರವಾಗಿ  ಶ್ರೀ ದಯಾಕರ್ ಪ್ರಸಾದ್  , ಗ್ರಾಮ ಪಂಚಾಯತ್ ಪರವಾಗಿ ಗ್ರಾಮ ಪಂಚಾಯತ್ ಪರವಾಗಿ ಅಧ್ಯಕ್ಷರಾದ ಶ್ರೀಮತಿ ವಸಂತಿ ಪೂಜಾರಿ, ಉಪಾಧ್ಯಕ್ಷರಾದ ಶ್ರೀಮತಿ ರಮ್ಯಕಾಂತಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಾದ ಶ್ರೀಮತಿ ಅಮೃತ ಕುಲಾಲ್ ಇವರಿಗೆ ಸನ್ಮಾನವನ್ನು ಮಾಡಲಾಯಿತು.


ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ನ ಸದಸ್ಯರುಗಳು, ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ತಾರನಾಥ್ ಬಂಗೇರ, ಮುದ್ರಾಡಿ ಹಾಗೂ ಕಬ್ಬಿನಾಲೆ ಗ್ರಾಮದ  ಗ್ರಾಮಸ್ಥರು, ಕಾರ್ಯದರ್ಶಿ ಸಿಬ್ಬಂದಿ ವರ್ಗ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಉದಯ್ ಗೌಡ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು  ಪಂಚಾಯತ್ ಸದಸ್ಯರಾದ ಶ್ರೀಮತಿ  ಶಾಂತ ದಿನೇಶ್ ಪೂಜಾರಿ ಇವರು ನಿರೂಪಿಸಿ, ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ರಮ್ಯಕಾಂತಿ ಸ್ವಾಗತಿಸಿ, ಪಂಚಾಯತ್ ಹಿರಿಯ ಸದಸ್ಯರಾದ ಶ್ರೀ ಎಂ ಗಣಪತಿಯವರು ಧನ್ಯವಾದ ಸಮರ್ಪಿಸಿದರು.

Related posts

ಶಗುನ್ ಎಸ್ ವರ್ಮ ಹೆಗ್ಡೆಯವರಿಗೆ ಕಾರ್ಕಳ ಜೈನ ಮಠದಿಂದ ಸನ್ಮಾನ

Madhyama Bimba

ಸರಕಾರಿ ನೌಕರರ ಸಂಘದ ಚುನಾವಣೆ

Madhyama Bimba

ನಿಂಜೂರು ಜಗನ್ನಾಥ ಶೆಟ್ಟಿ ನಿಧನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More