ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿತ್ ಬೈಲ್ ಎಂಬಲ್ಲಿ ನ. 18ರಂದು ರಾತ್ರಿ ಸುಮಾರು 8 ಗಂಟೆಗೆ ನಡೆದ ಎನ್ಕೌಂಟರ್ಗೆ ನಕ್ಸಲ್ ಮುಖಂಡ ವಿಕ್ರಂ ಗೌಡ ಬಲಿಯಾಗಿದ್ದಾರೆ.
ಸುಮಾರು 12ವರ್ಷಗಳ ನಂತರ ಈ ಭಾಗದಲ್ಲಿ ನಕ್ಸಲರು ಬಂದಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಏ ಎನ್ ಎಫ್ ಕೂಂಬಿಂಗ್ ಆರಂಭಿಸಿತು.
ನವೆಂಬರ್ 18ರ ರಾತ್ರಿ ಸುಮಾರು 8 ಗಂಟೆಗೆ ಎನ್ಕೌಂಟರ್ ನಡೆದ ಬಗ್ಗೆ ವರದಿಯಾಗಿದೆ.
ಈ ಭಾಗದಲ್ಲಿ ಕಳೆದ 15 ದಿನಗಳಿಂದ ನಕ್ಸಲ್ ಚಟುವಟಿಕೆ ಆರಂಭ ಆಗಿದ್ದು ಜನರನ್ನು ಸಂಘಟನೆ ಮಾಡುವ ಕಾರ್ಯದಲ್ಲಿ ಅವರು ತೊಡಗಿದ್ದರು.
ಈ ಮಾಹಿತಿ ತಿಳಿದ ಏ ಎನ್ ಎಫ್ ತಂಡವು ಪಿತ ಬೈಲ್ ಪ್ರದೇಶದಲ್ಲಿ ಮನೆಗಳನ್ನು ಸುತ್ತುವರಿದು ಎನ್ ಕೌಂಟರ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.