ಕಾರ್ಕಳ: ತಾಲೂಕಿನ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿಗೆ ದಿ ಗ್ರೇಟ್ ಇಂಡಿಯನ್ ಎಂಟರ್‌ಪ್ರೆನರ್‌ಶಿಫ್, ಬ್ಯುಸಿನೆಸ್ ಹಾಗೂ ಸ್ಟಾರ್ಟಪ್ ಸಂಸ್ಥೆಯು ಕೊಡಮಾಡುವ ಭಾರತದ ಎಲೈಟ್ ಎಜುಕೇಷನ್ ಹಾಗೂ ಇನ್ಸ್ಟಿಟ್ಯೂಷನಲ್ ಎಕ್ಷಲೆನ್ಸ್ ಪ್ರಶಸ್ತಿಯ ಅಡಿಯಲ್ಲಿ 2024ನೇ ಸಾಲಿನ “ಮೋಸ್ಟ್ ಪ್ರಾಮಿಸಿಂಗ್ ಹಾಗೂ ಟ್ರಸ್ಟೆಡ್ ಪದವಿಪೂರ್ವ ಕಾಲೇಜು- 2024” ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಕೊಡುಗೆ, ಅತ್ಯುತ್ತಮ ಆಡಳಿತ, ಗ್ರಾಮೀಣ ಮತ್ತು ನಗರ ಪ್ರದೇಶಗಳ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಿದ ಉಚಿತ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಪ್ರತಿಭೆಗೂ ಮೀರಿದ ಫಲಿತಾಂಶ, ನಿರಂತರವಾಗಿ ದಾಖಲಿಸಿದ ಅತ್ಯುತ್ತಮ ಫಲಿತಾಂಶಗಳ ಅಂಶಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಬೆಂಗಳೂರಿನಲ್ಲಿ ಇದೇ 2024 ಅಕ್ಟೋಬರ್ ತಿಂಗಳ 25ನೇ ತಾರೀಖಿನಂದು ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶಂಕರ್ ಹ್ಯಾಬಿಟೇಟ್ ಟೆಕ್ನಾಲಜಿ ಗ್ರೂಪ್‌ನ ಮುಖ್ಯಸ್ಥರಾದ ಪದ್ಮಶ್ರೀ ಡಾ.ಗೋಪಾಲನ್ ನಾಯರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.ಕ್ರೈಸ್ಟ್‌ಕಿಂಗ್ ಆಡಳಿತ ಮಂಡಳಿಯ ಸದಸ್ಯರಾದ ಡಾ.ಪೀಟರ್ ಫೆರ್ನಾಂಡಿಸ್ ಅವರು ಸಂಸ್ಥೆಯ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಖ್ಯಾತ ಮನೋರೋಗ ತಜ್ಞರಾದ ಪದ್ಮಶ್ರೀ ಡಾ.ಸಿ.ಆರ್. ಚಂದ್ರಶೇಖರ್ ಹಾಗೂ ಕರ್ನಾಟಕ ಸರಕಾರದ ಕರ್ನಾಟಕ ರಾಜ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಕೇಂದ್ರದ ಮಾಜಿ ಕಾರ್ಯನಿರ್ವಹಣಾ ಅಧಿಕಾರಿಗಳು ಹಾಗೂ ಮಾಜಿ ಮುಖ್ಯ ಕಾರ್ಯದರ್ಶಿಗಳಾದ ಶ್ರೀಕಂಠೇಶ್ವರ ಸ್ವಾಮಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.