Blog

ಹೆಬ್ರಿ ಕುಲಾಲ ಸಂಘದ ವಾರ್ಷಿಕ ಮಹಾಸಭೆ, ಸತ್ಯನಾರಾಯಣ ಪೂಜೆ ಮತ್ತು ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣಾ ಸಮಾರಂಭ

ಕುಲಾಲ ಸಂಘ(ರಿ) ಹೆಬ್ರಿ ತಾಲೂಕು ಇದರ ವಾರ್ಷಿಕ ಮಹಾಸಭೆ ಸತ್ಯನಾರಾಯಣ ಪೂಜೆ ಮತ್ತು ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣಾ ಸಮಾರಂಭವು ನ.17 ರಂದು ಹೆಬ್ರಿ ಚೈತನ್ಯ ಸಭಾಭವನದಲ್ಲಿ ಜರುಗಿತು.


ವಿಜಯ ವಿಠ್ಠಲ್ ಕೆಮಿಕಲ್ಸ್ ಎಂ ಡಿ ಕೆ ಎ ಲಕ್ಷ್ಮಣ್ ಕುಲಾಲ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಯುವಕ ಯುವತಿಯರು ಸ್ವಂತ ಉದ್ಯೋಗದಿಂದ ಸ್ವಾವಲಂಬಿಯಾಗಿ ಸಮಾಜದ ಅಭಿವೃದ್ದಿಗೆ ಕೈ ಜೋಡಿಸಬೇಕಾಗಿ ಎಂದು ಹೇಳಿದರು.

ನಂತರ ಕುಂಬಾರಿಕೆ ಕುಲಕಸುಬು ಮಾಡುವವರಿಗೆ ಹಾಗೂ ವಿಭಿನ್ನ ಶೈಲಿಯ ಕೃಷಿಕರಿಗೆ ಮತ್ತು ಸಾಧಕರಿಗೆ ಸನ್ಮಾನಿಸಲಾಯಿತು. ಸಂಘದ ಮಹಾಪೋಷಕರು ಮತ್ತು ಪೋಷಕರಿಗೆ ಗೌರವದಿಂದ ಸನ್ಮಾನಿಸಲಾಯಿತು.
ಪಿ ಡಬ್ಲ್ಯೂ ಡಿ ಗುತ್ತಿಗೆದಾರರಾದ ರಾಜೀವ ಕುಲಾಲ್ ಮಾತನಾಡಿ ಸಂಘದಲ್ಲಿ ಒಗ್ಗೂಡಿ ಮುಂದೆ ಹೋಗಬೇಕೆಂದು ಸಲಹೆ ಇತ್ತರು.

ನಂತರ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಿಸಲಾಯಿತು.

ಗೌರವಾಧ್ಯಕ್ಷರಾದ ಭೋಜ ಕುಲಾಲ್ ಬೆಳಂಜೆ ಮಾತಾಡಿ ಸಂಘಕ್ಕೆ ಸ್ವಂತ ನಿವೇಶನದ ಅಗತ್ಯ ಇದೆ ಎಂದರು.
ಪೆರ್ಡುರು ಕುಲಾಲ ಸಂಘ ಅಧ್ಯಕ್ಷರಾದ ಕಾಳು ಕುಲಾಲ್ ಮಾತನಾಡಿ ಪ್ರಥಮ ವರ್ಷದಲ್ಲಿ ಕುಲಾಲ ಸಂಘ ಹೆಬ್ರಿ ತಾಲೂಕು ಇಷ್ಟೊಂದು ಅದ್ದೂರಿಯಾಗಿ ನಡೆಯುತ್ತಿದ್ದು ಇದರ ಸಂಘಟನಾ ಶಕ್ತಿ ಅಭಿನಂದನೀಯ ಎಂದರು.

ಕಾರ್ಕಳ ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್ ಮಾತನಾಡಿ ತುಳು ಮತ್ತು ಕನ್ನಡದಲ್ಲಿ ಮಾತಾಡುವವರನ್ನು ಒಗ್ಗೂಡಿಸಿಕೊಂಡು ಸಂಘಟನೆ ಮಾಡುತ್ತಿರುವುದು ಹೆಬ್ರಿ ಕುಲಾಲ ಸಂಘದಲ್ಲಿ ಮಾತ್ರ ಎಂದು ಅಭಿನಂದಿಸಿದರು.

ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ಸುರೇಂದ್ರ ಕುಲಾಲ್ ವರಂಗ ಮಾತನಾಡಿ ನಾವು ತಾಲೂಕಿನಾದ್ಯಂತ ಸಂಘಟನೆಯನ್ನು ವಿಸ್ತರಿಸಬೇಕು, ನಮ್ಮ ಕುಲಾಲ ಸಮಾಜದ ಎಲ್ಲ ಜನರು ತಾಲೂಕ್ ಸಂಘದ ಒಟ್ಟಿಗೆ ಬರುವ ಹಾಗೆ ಎಲ್ಲರೂ ಕಾರ್ಯಾಪ್ರವೃತರಾಗಬೇಕೆಂದು ಹೇಳಿದರು.

ಸಭೆಯಲ್ಲಿ ಶ್ರೀರಾಮ್ ಜುವೆಲ್ಲರ್ಸ್‌ನ ಕೆ ನಾರಾಯಣ್ ಕುಲಾಲ್, ಪಿ ಡಬ್ಲ್ಯೂ ಡಿ ಗುತ್ತಿಗೆದಾರರಾದ ವಿಠಲ್ ಕುಲಾಲ್, ಮಹಿಳಾ ಘಟಕದ ಅಧ್ಯಕ್ಷರಾದ ಸುಮಿತ್ರಾ ಕುಲಾಲ್ ಬೆಪ್ದೆ ಮತ್ತು ಪ್ರಧಾನ ಕಾರ್ಯದರ್ಶಿ ಸುದರ್ಶನ್ ಕುಲಾಲ್ ದರ್ಬುಜೆ ಉಪಸ್ಥಿತರಿದ್ದರು.

ಸಭೆಯನ್ನು ಅಣ್ಣಪ್ಪ ಕುಲಾಲ್ ಚಾರ ಸ್ವಾಗತಿಸಿದರು, ವಂದನಾ ಕುಲಾಲ್ ಚಾರ ನಿರೂಪಿಸಿದರು ಮತ್ತು ಸುನಂದ ಕುಲಾಲ್ ಮುಳ್ಳಾಗುಡ್ಡೆ ಧನ್ಯವಾದವಿತ್ತರು.

Related posts

ಜನಾರ್ಧನ್ ರಿಗೆ ಅಭಿನಂದನೆ

Madhyama Bimba

ವಲ್ಫ್ ಬೋರ್ಡಿನ ನೀತಿ ವಿರೋಧಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

Madhyama Bimba

ಬಾವಿಗೆ ಹಾರಿ ಆತ್ಮಹತ್ಯೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More