ಮೂಡುಬಿದಿರೆ

ಮಳೆಗಾಲದಲ್ಲಿ ಕೊಚ್ಚಿ ಹೋದ ಸೇತುವೆ ಮರುನಿರ್ಮಾಣಕ್ಕೆ ಗ್ರಾಮಸ್ಥರ ಬೇಡಿಕೆ

ಮಳೆಗಾಲದ ಬಿರುಸಿನ ನೀರ ಸಂಚಾರಕ್ಕೆ ಕೊಚ್ಚಿ ಹೋಗಿದ್ದ ಪಣಪಿಲ ಗ್ರಾಮದ ನಂದೊಟ್ಟು ಬಳಿಯ ಸೇತುವೆಗೆ ಮುಕ್ತಿ ಕಾಣದೆ ಗ್ರಾಮದ ಜನತೆ ಅತಂತ್ರ ಸ್ಥಿತಿಯಲ್ಲೇ ದಿನ ದೂಡುವಂತಾಗಿದೆ.


ಬೋರುಗುಡ್ಡೆಯಿಂದ ಪಣಪಿಲದ ಉಮಿಲುಕ್ಕು ಮೂಲಕ ಅಳಿಯೂರು ಹಾಗೂ ದರೆಗುಡ್ಡೆಯನ್ನು ಸಮೀಪ ರಸ್ತೆಗಳೊಂದಿಗೆ ಸಂಪರ್ಕಿಸಲು ಬೇಕಾಗಿದ್ದ ಸೇತುವೆ ಕೆಲವೇ ವರ್ಷಗಳ ಹಿಂದೆ ನಿರ್ಮಾಣವಾಗಿತ್ತು. ಈ ವರ್ಷ ಸಮೀಪದ ಕಾಡು ಪ್ರದೇಶಗಳಿಂದ ಮೇಘಸ್ಫೋಟಗೊಂಡು ಆರ್ಭಟಿಸಿ ಸಂಚರಿಸಿದ ನೀರಧಾರೆಗೆ ಸೇತುವೆ ಕೊಚ್ಚಿಕೊಂಡು ಹೋಗಿ ಒಂದು ಗ್ರಾಮವನ್ನು ಎರಡಾಗಿಸಿತ್ತು.


ಸೇತುವೆ ಕೊಚ್ಚಿ ಹಲವು ತಿಂಗಳುಗಳೇ ಕಳೆದರೂ ಸರಕಾರದ ಅನುದಾನ ದೊರೆಯದೇ ನೂತನ ಸೇತುವೆ ನಿರ್ಮಾಣ ಮರೀಚಿಕೆಯಾಗಿ ಉಳಿದಿದೆ. ಈ ಭಾಗದಿಂದ ದೂರದ ಶಾಲೆಗಳಿಗೆ ತೆರಳುವ ಮಕ್ಕಳಿಗೆ ತುಂಬಾ ತೊಂದರೆ ಉಂಟಾಗಿದೆ. ಸ್ಥಳೀಯರು ಸೇರಿ ಮರದ ಜೋಡಣೆಯೊಂದಿಗೆ ತಾತ್ಕಾಲಿಕ ಸೇತುವೆ ನಿರ್ಮಿಸಿದ್ದರೂ ಅಗಲವಾಗಿರುವ ಈ ತೋಡನ್ನು ದಾಟುವುದು ಅಪಾಯಕಾರಿಯಾದ ಸನ್ನಿವೇಶವೇ ಆಗಿದೆ.

ಈ ಬಗ್ಗೆ ಸರಕಾರವನ್ನು ಹಲವು ಬಾರಿ ಕೋರಿಕೊಂಡರು ಅನುದಾನ ಮಂಜೂರಾಗದೇ ಗ್ರಾಮದ ಜನರನ್ನು ಅತಂತ್ರ ಸ್ಥಿತಿಯಲ್ಲಿ ಇರುವಂತೆ ಮಾಡಲಾಗಿದೆ. ಈ ಭಾಗದಿಂದ ಪಣಪಿಲ ಪ್ರಾಥಮಿಕ ಶಾಲೆಗೆ ಹಲವಾರು ಮಕ್ಕಳು ವಿದ್ಯಾಭ್ಯಾಸಕ್ಕಾಗಿ ತೆರಳುತ್ತಿದ್ದು ಅವರ ಸಂಚಾರಕ್ಕೆ ತುಂಬಾ ತೊಂದರೆಯುಂಟಾಗಿದೆ.

Related posts

ಶಿರ್ತಾಡಿ ಬಿಲ್ಲವ ಸಂಘದಿಂದ ಪೊಲೀಸ್ ದೂರು

Madhyama Bimba

ಅಕ್ರಮ ದನ ಸಾಗಾಟ :ಹಿಂದೂ ಸಂಘಟನೆ ಕಾರ್ಯಾಚರಣೆ

Madhyama Bimba

ಡಿ. 29: ಯುವವಾಹಿನಿ ವಾರ್ಷಿಕ ಸಮಾವೇಶ- ಮೂಡುಬಿದಿರೆ ಘಟಕದ ಆತಿಥ್ಯ-ಪೋಸ್ಟರ್ ಬಿಡುಗಡೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More