ಕಾರ್ಕಳ

ಕಾರ್ಕಳದಲ್ಲಿ ಸ್ಕೂಟಿ- ಕಾರು ಡಿಕ್ಕಿ

ಕಾರ್ಕಳ: ಬೋಳಾ ಗ್ರಾಮದ ಜಯ (59) ಇವರು ಕಾರ್ಕಳದ ಮೂರು ಮಾರ್ಗದ ಕಡೆಯಿಂದ ಆನೆಕೆರೆ ಕಡೆಗೆ KA-21-R-2294ನೇ ನಂಬ್ರದ ಸ್ಕೂಟಿಯಲ್ಲಿ ಹೋಗುತ್ತಿರುವಾಗ, ಕಾರ್ಕಳ ಕಸಬಾ ಗ್ರಾಮದ ಗಾಂಧಿಮೈದಾನ ಕ್ರಾಸ್‌ನಿಂದ ಸ್ವಲ್ಪ ಮುಂದೆ ಶೇಷಗಿರಿ ಎಂಬುವವರ ಮನೆಯ ಎದುರುಗಡೆ ರಸ್ತೆ ಎಡಬದಿ ನಿಲ್ಲಿಸಿದ್ದ ಕಾರು ನಂಬ್ರ KA-20-MC-2157 ನೇ ಕಾರಿನ ಚಾಲಕ ಜೋರ್ಜ್ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಗಮನಿಸದೇ ತನ್ನ ಕಾರಿನ ಬಲಬದಿಯ ಬಾಗಿಲನ್ನು ತೆರೆದ ಪರಿಣಾಮ ಜಯ ರವರು ಚಲಾಯಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆದಿದ್ದಾರೆ.

ಈ ಸಂದರ್ಭದಲ್ಲಿ ಸ್ಕೂಟಿ ಸಮೇತ ರಸ್ತೆಗೆ ಬಿದ್ದ ಪರಿಣಾಮ ಜಯ ರವರ ತಲೆಗೆ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಕಾರ್ಕಳ ಸ್ಪಂದನಾ ಅಸ್ಪತ್ರೆಗ ಹೋಗಿ ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಒಳರೋಗಿಯಾಗಿ ದಾಖಲಿಸಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲಿಪ್ರಕರಣ ದಾಖಲಾಗಿರುತ್ತದೆ.

Related posts

ಚಿತ್ರಕಲಾ ಸ್ಪರ್ಧೆ: ಜೇಸಿ ಶಾಲಾ ವಿದ್ಯಾರ್ಥಿ ಸಾತ್ವಿಕ್ ಶೆಟ್ಟಿ ಪ್ರಥಮ

Madhyama Bimba

ಕಾರ್ಕಳ ಜೋಡುರಸ್ತೆಯ ದುರ್ಗಾ ಎಲೆಕ್ರ್ಟಾನಿಕ್ಸ್ & ಫರ್ನಿಚರ್ಸ್’ನಲ್ಲಿ ವಿಶೇಷ ಕೊಡುಗೆಗಳು ಲಭ್ಯ-ಪ್ರತಿಯೊಂದು ಖರೀದಿಯ ಮೇಲೆ ವಿಶೇಷ ರಿಯಾಯಿತಿ ಮತ್ತು ಗಿಫ್ಟ್ ಕೂಪನ್

Madhyama Bimba

ವರಂಗದ ಪ್ರಭಾಕರ ನಾಪತ್ತೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More