ಮೂಡುಬಿದಿರೆ

ಶಿರ್ತಾಡಿ ಬಿಲ್ಲವ ಸಂಘದಿಂದ ಪೊಲೀಸ್ ದೂರು

ಬಿಲ್ಲವ ಸಮುದಾಯದ ಹೆಣ್ಣುಮಕ್ಕಳ ಬಗ್ಗೆ ಅಸಹ್ಯ ಪದ ಬಳಸಿ ಅವಾಚ್ಯವಾಗಿ  ನಿಂದಿಸಿದ ಪಂಜ ಉಪ ವಲಯ ಅರಣ್ಯಧಿಕಾರಿ ಸಂಜೀವ ಪೂಜಾರಿ ಕಾಣಿಯೂರು   ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮೂಡುಬಿದಿರೆ ತಾಲೂಕಿನ ಶಿರ್ತಾಡಿ ಬ್ರಹ್ಮ ಶ್ರೀ  ಗುರು ನಾರಾಯಣ ಸ್ವಾಮಿ ಸೇವಾ ಸಂಘದ ನೇತೃತ್ವದಲ್ಲಿ ಮೂಡು ಬಿದಿರೆ  ಪೊಲೀಸರಿಗೆ ದೂರು ನೀಡಲಾಯಿತು. ಸಂಘದ ಅಧ್ಯಕ್ಷ ಸೋಮನಾಥ ಶಾಂತಿ, ಪಂಚಾಯತ್ ಉಪಾಧ್ಯಕ್ಷ ಸಂತೋಷ್ ಕೋಟ್ಯಾನ್, ಪ್ರಮುಖರಾದ ಲಕ್ಷ್ಮಣ್ ಸುವರ್ಣ, ವಿಶ್ವನಾಥ್ ಕೋಟ್ಯಾನ್ ಹನ್ನೇರ್ ಹಾಗು ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಿಲ್ಲವ ಹೆಣ್ಣು ಮಕ್ಕಳನ್ನು ಅವಮಾನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಸಂಜೀವ ಕಾಣಿಯೂರುಸರ್ಕಾರಿ ನೌಕರಿಯಿಂದ ವಜಾಗೊಳಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು. 

Related posts

ಯಕ್ಷದೇವ ಕಲಾಮಂಡಳಿ 29ನೇ ವರ್ಷದ ಯಕ್ಷ ಸಂಭ್ರಮದಲ್ಲಿ ದಾಸಪ್ಪ ರೈಗೆ ಯಕ್ಷದೇವ ಪ್ರಶಸ್ತಿ

Madhyama Bimba

ಸುಮುಖ ಕುಣಿತ ಭಜನಾ ಮಂಡಳಿ ಉದ್ಘಾಟನೆ

Madhyama Bimba

ಗಾಳಿ-ಮಳೆಗೆ ಮನೆ ಹಾನಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More