ಆದಿತ್ಯ ಟ್ರಸ್ಟ್ (ರಿ) ನಕ್ರೆ ಕಾರ್ಕಳ ವತಿಯಿಂದ ದಿ. ಶ್ರೀಮತಿ ಯಶವಂತಿ ಎಸ್ ಸುವರ್ಣ ಇವರ 85 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಪ್ರೊ. ಉಷಾರಾಣಿ ಎಸ್. ಸುವರ್ಣ, ನಿವೃತ್ತ ಪ್ರಾಧ್ಯಾಪಿಕೆ ಇವರ ಪ್ರಾಯೋಜಕತ್ವದಲ್ಲಿ ಆರ್ಥಿಕ ನೆರವು ಕಾರ್ಯಕ್ರಮ ನಕ್ರೆ ಶ್ರೀ ಮಹಾಲಿಂಗೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆ. 02ರಂದು ಜರಗಿತು.
ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯ್ಯೊಪಾಧ್ಯಾಯರು ಹಾಗೂ ರಾಷ್ಟ್ರ ಮಟ್ಟದ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಜಾರ್ಜ್ ಕ್ಯಾಸ್ತಾಲಿನೋ ಮಾತನಾಡಿ ಶ್ರೀಮತಿ ಯಶವಂತಿ ಎಸ್ ಸುವರ್ಣರು ಮಾಡಿದ ಸಾಮಾಜಿಕ ಉತ್ತಮ ಕಾರ್ಯಕ್ರಮಗಳು, ಬಡ ಜನರ ಬಗ್ಗೆ ಅವರಿಗಿದ್ದ ಕಾಳಜಿ, ಸಾಮಾಜಿಕ ಹೋರಾಟಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.
ಬಿಪಿನ್ ಚಂದ್ರಪಾಲ್ ಮಾತನಾಡಿ ಆದಿತ್ಯ ಟ್ರಸ್ಟ್ ವಿಕಲ ಚೇತನರಿಗಾಗಿ ಮಾಡುತ್ತಿರುವ ಕಾರ್ಯಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು.
ಕುಕ್ಕುಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಶಶಿಕಲಾ ಅಧ್ಯಕ್ಷತೆ ವಹಿಸಿ ಮಾತನಾಡಿ ಶ್ರೀಮತಿ ಯಶವಂತಿ ಎಸ್ ಸುವರ್ಣರ ಜನ್ಮ ದಿನೋತ್ಸವದ ಪ್ರಯುಕ್ತ ಆರ್ಥಿಕ ನೆರವು ನೀಡಿ ವಿಶೇಷವಾಗಿ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ಉಡುಪಿ ಎಂ.ಜಿ.ಎಂ. ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಉಷಾರಾಣಿ ಎಸ್ ಸುವರ್ಣರವರು ತಮ್ಮ ತಾಯಿಯ ದಿನದ ನೆನಪಿಗಾಗಿ ನೀಡುತ್ತಿರುವ ಆರ್ಥಿಕ ಸಹಾಯದ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿದರು.
ಶಾಲಾ ಶಿಕ್ಷಕಿ ಶ್ರೀಮತಿ ಅಶ್ವಿತ ಇವರು ದಿ. ಯಶವಂತಿ ಎಸ್ ಸುವರ್ಣರು ಗಳಿಸಿದ ಅಪಾರ ಸಾಹಿತ್ಯ ಜ್ಞಾನ, ಅವರು ಸಾಹಿತ್ಯದ ಮೂಲಕ ಸಾಮಾಜಿಕ ಮೌಢ್ಯತೆಗಳ ಕುರಿತು ಜನಜಾಗೃತಿ ಎಚ್ಚರಿಕೆ ಸಂದೇಶಗಳು, ಕಲಾ ಬೆಳವಣಿಗೆ ಕುರಿತು ಗುಣಗಾನ ಮಾಡಿದರು.
ನಿವೃತ್ತ ಶಿಕ್ಷಕಿ ಶ್ರೀಮತಿ ರೀನಾ ಕ್ರಸ್ತಲಿನೋ, ಪೊಲೀಸ್ ಇಲಾಖೆ ನಿವೃತ್ತ ಆಡಳಿತಧಿಕಾರಿಯಾದ ದಿವಾಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಮೇಶ್ ನಕ್ರೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.