ಮೂಡುಬಿದಿರೆ

ಶಿರ್ತಾಡಿಯಲ್ಲಿ ಯೂನಿಯನ್ ಬ್ಯಾಂಕ್ ಹಣಕಾಸು ಸಾಕ್ಷರತಾ ಶಿಬಿರ

ಶಿರ್ತಾಡಿ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ಮುಖ್ಯಸ್ಥೆ ಶ್ರೀಮತಿ ತೇಜಸ್ವಿನಿ ವಿ ಸಿ ಅವರ ಮಾರ್ಗದರ್ಶನದಲ್ಲಿ, ಫೆ 13ರಂದು ಶಿರ್ತಾಡಿಯ ಗ್ರಾಮ ಪಂಚಾಯತ್‌ನಲ್ಲಿ ಹಣಕಾಸು ಸಾಕ್ಷರತಾ ಶಿಬಿರವನ್ನು ನಡೆಯಿತು.


ಬ್ಯಾಂಕ್ ನ ಪ್ರಾದೇಶಿಕ ಮುಖ್ಯಸ್ಥೆ ಮೇಡಂ ಶ್ರೀಮತಿ ತೇಜಸ್ವಿನಿ ವಿಸಿ ಮತ್ತು ಆರ್ಎಬಿಡಿ ಇನ್‌ಚಾರ್ಜ್ ದಿನೇಶ್ ಎಚ್‌ಕೆ ಸಭೆಯನ್ನುದ್ದೇಶಿಸಿ ಗ್ರಾಹಕರಿಗೆ ಶಿಕ್ಷಣ ನೀಡಿದರು. ಕೆವೈಸಿ, ಆರ್‌ಇಕೆವೈಸಿ, ಸಿಕೆವೈಸಿ,ಡಿಜಿಟಲ್ ವಂಚನೆಗಳ ತಡೆಗಟ್ಟುವಿಕೆ, ಡೇಟಾ ರಕ್ಷಣೆ, ಹಣಕಾಸು ಉತ್ಪನ್ನಗಳು, ಡಿಜಿಟಲ್ ಬ್ಯಾಂಕಿಂಗ್, ಗ್ರಾಹಕ ರಕ್ಷಣೆ, ಕೆವೈಸಿ ಸಂಬಂಧಿತ ವಂಚನೆಗಳ ವಿರುದ್ಧ ಎಚ್ಚರಿಕೆ, ಹಣವನ್ನು ಲೂಟಿ ಮಾಡುವುದರ ವಿರುದ್ಧ ಎಚ್ಚರಿಕೆ ಬಗ್ಗೆ ಮಾಹಿತಿಯಿತ್ತರು.

ಗ್ರಾಮಪಂಚಾಯತ್ ಪಿಡಿಒ ಆಶಾಲತಾ, ನಿಕಟ ಪೂರ್ವ ಅಧ್ಯಕ್ಷರು ಅಗ್ನೇಸ್ ಡಿಸೋಜಾ ಮತ್ತು ಶಿರ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಪ್ರವೀಣ್ ಜೈನ್ ಆರ್ಥಿಕ ಸಾಕ್ಷರತೆಯ ಬಗ್ಗೆ ಸಭೆಯಲ್ಲಿ ಮಾತನಾಡಿದರು. ಸಭಾ ಕಾರ್ಯಕ್ರಮವನ್ನು ಗಣೇಶ್ ಬಿ ಅಳಿಯೂರು ನಿರೂಪಿಸಿದರು.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಿರ್ತಾಡಿ ಮುಖ್ಯಸ್ಥರಾದ ಕಾರ್ತಿಕ್, ಸಂಜೀವಿನಿ ಎಂಬಿಕೆ ಶ್ರೀಮತಿ ಪ್ರತಿಭಾ ಉಪಸ್ಥಿತರಿದ್ದರು.

Related posts

ಪ್ರಧಾನಮಂತ್ರಿ ಸೂರ್ಯಘರ್‌ ಮುಫ್ತ್‌ ಬಿಜ್ಲಿ ಯೋಜನೆ- ಮಾದರಿ ಸೋಲಾರ್‌ ಗ್ರಾಮವಾಗಿ ಪುತ್ತಿಗೆ ಗ್ರಾಮ ಪಂಚಾಯತ್

Madhyama Bimba

ಸಿಪ್ರಿಯನ್ ಪಿಂಟೋ ಇನ್ನಿಲ್ಲ

Madhyama Bimba

ನೆಲ್ಲಿಕಾರುನಲ್ಲಿ ಗಿಡ ನೆಟ್ಟು ವಿಶ್ವ ಪರಿಸರ ದಿನ ಆಚರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More