ಮೂಡುಬಿದಿರೆ

ಮೂಡುಬಿದಿರೆ ರಾಮಕ್ಷತ್ರೀಯ ಸೇವಾ ಸಂಘದ ಮಹಾಸಭೆ

ಮೂಡುಬಿದಿರೆ: ರಾಮಕ್ಷತ್ರೀಯ ಸೇವಾ ಸಂಘ(ರಿ.), ಮಹಿಳಾ ವೃಂದ, ಯುವ ವೃಂದ, ಭಜನಾ ವೃಂದ ವತಿಯಿಂದ ಸತ್ಯನಾರಾಯಣ ಪೂಜೆ ಹಾಗೂ ವಾರ್ಷಿಕ ಮಹಾಸಭೆಯೂ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಏ. 19ರಂದು ನಡೆಯಿತು.

ಕಾರ್ಯಕ್ರಮದಲ್ಲಿ ರಾಮಕ್ಷತ್ರಿಯ ಸೇವಾ ಸಂಘ(ರಿ.) ಅಧ್ಯಕ್ಷರಾದ ಪ್ರೇಮಾನಂದ ಕೆ.ಎಸ್, ಪಣಂಬೂರು ಮಂಗಳೂರು ಉತ್ತರ ವಲಯದ ಎ.ಸಿ.ಪಿ ಶ್ರೀಕಾಂತ್ ಕೆ, ಶ್ರೀ ರಾಮ ಕ್ರೆಡಿಟ್ ಕೋ. ಸೊಸೈಟಿಯ ಅಧ್ಯಕ್ಷರಾದ ನಾಗರಾಜ ಕಾಮಧೇನು, ದಕ್ಷಿಣ ಕನ್ನಡ ಜಿಲ್ಲೆಯ ಜನಪದ ಪರಿಷತ್ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಸಮಾಜಮುಖಿ ಕಾರ್ಯಗಳಿಗೆ ಹಾಗೂ ಧಾರ್ಮಿಕ ಸಂಘಟನೆಗಳ ಸೇವೆಗಾಗಿ ಜವನೆರ್ ಬೆದ್ರ ಫೌಂಡೇಶನ್(ರಿ.) ಸಂಸ್ಥಾಪಕ ಅಮರ್ ಕೋಟೆಯವರನ್ನು ಗೌರವಿಸಲಾಯಿತು.
ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ, ಆಶಕ್ತರಿಗೆ ಸಹಾಯ ಹಸ್ತದ ಮಾಡುವ ಕಾರ್ಯವನ್ನು ಮಾಡಲಾಯಿತು. ಸೂರ್ಯ ರಾವ್ ವರದಿ ವಾಚಿಸಿದರು. ಸಿಂಚನ, ಸ್ಪೂರ್ತಿ ಹಾಗೂ ಸೌಜನ್ಯ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಗಳು ನಡೆಯಿತು. ಕಾರ್ಯಕ್ರಮದಲ್ಲಿ ರಾಮಕ್ಷತ್ರೀಯ ಸೇವಾ ಸಂಘ(ರಿ.) ಸಮಿತಿಯ ವಿವಿಧ ಸಂಘಟನೆಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಭಾಗಿಯಾಗಿದ್ದರು.

Related posts

ಆಳ್ವಾಸ್ ಸಿಬಿಎಸ್‌ಇಯಲ್ಲಿ 46ವಿದ್ಯಾರ್ಥಿಗಳು 95% ಕ್ಕೂ ಹೆಚ್ಚು ಅಂಕ: ನಾಲ್ಕು ವಿದ್ಯಾರ್ಥಿಗಳು ಶೇ 99ರ ಸಾಧನೆ

Madhyama Bimba

ಚಿಕಿತ್ಸೆಗಾಗಿ ಸಾಯಿ ನೆರವು

Madhyama Bimba

ಆಳ್ವಾಸ್‌ನ ‘ಲಿಪಿ’ ಮುದ್ರಣಾಲಯ ಲೋಕಾರ್ಪಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More