ದೇಶದ ಅತ್ಯುನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಯಾದ ಐಐಟಿ ಮುಂಬೈ , ಐಐಟಿ ದೆಹಲಿ, ಐಐಟಿ ಗುವಾಹಟಿ, ಐಐಟಿ ಹೈದರಾಬಾದ್, ಐಐಟಿ ರೂರ್ಕಿ ಮತ್ತು ಐಐಟಿ ಜಬಲಪುರ್ ಸಂಸ್ಥೆಗಳಿಗೆ ಬ್ಯಾಚುಲರ್ ಆಫ್ ಡಿಸೈನ್ ಕೋರ್ಸ್‌ಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ 2026 ಜನವರಿ 18 ರಂದು ನಡೆದ ಯು.ಸಿ.ಇ.ಇ.ಡಿ ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಸೂರಜ್ ಸುರೇಶ್ ರಾಷ್ಟ್ರಮಟ್ಟದಲ್ಲಿ ಜನರಲ್ ವಿಭಾಗದಲ್ಲಿ 518 ರ್‍ಯಾಕ್ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳಾದ ಭೂಮಿಕಾ ವೈ ಒಬಿಸಿ- ಎನ್‌ಸಿಎಲ್ ವಿಭಾಗದಲ್ಲಿ 1378 ನೇರ್‍ಯಾಂಕ್, ಸಂಕೀರ್ತ್ ರಾಜ್ ಕೆ. ಜಿ. 1381ನೇ ರ್‍ಯಾಂಕ್, ಚಿರಂತ್ ಕೆ.ಎನ್. ಒಬಿಸಿ- ಎನ್‌ಸಿಎಲ್ ವಿಭಾಗದಲ್ಲಿ 1507ನೇ ರ್‍ಯಾಂಕ್ ಪಡೆದುಕೊಂಡು ಮುಂದಿನ ಹಂತದ ಕೌನ್ಸೆಲಿಂಗ್ ಪ್ರಕ್ರಿಯೆಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಪ್ರಾಂಶುಪಾಲರು, ಆಡಳಿತ ಮಂಡಳಿ, ಪರೀಕ್ಷಾ ಸಂಯೋಜಕರಾದ ಸುಮಂತ್ ದಾಮ್ಲೆ, ಉಪನ್ಯಾಸಕ ವರ್ಗದವರು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
