ಕಾರ್ಕಳ

ಅಜೆಕಾರು ಜ್ಯೋತಿ ಮಹಿಳಾ ಮಂಡಳಿ ವತಿಯಿಂದ ಮಹಿಳಾ ದಿನಾಚರಣೆ

ಅಜೆಕಾರು ಜ್ಯೋತಿ ಮಹಿಳಾ ಮಂಡಳಿ ವತಿಯಿಂದ ಜ್ಯೋತಿ ಪ್ರೌಢ ಶಾಲಾ ಸಭಾ ಭವನದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.


ಸಮಾರಂಭದ ಉದ್ಘಾಟನೆಯನ್ನು ಜ್ಯೋತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಎಸ್. ಆರ್. ಸಗಾಯಾರವರು ಉದ್ಘಾಟಿಸಿ ಮಕ್ಕಳಿಗೆ ಒಳ್ಳೆ ಸಂಸ್ಕಾರವನ್ನು ಕಲಿಸಿ ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿ ಮಾಡಿ ಎಂದು ಹೆತ್ತವರಿಗೆ ಮನವರಿಕೆ ಮಾಡಿದರು.

 

ಮುಖ್ಯ ಅತಿಥಿಯಾಗಿ ಉದ್ಯಮಿ ಪ್ರದೀಪ್ ಸುವರ್ಣ ಉಪಸ್ಥಿತರಿದ್ದು ಮಹಿಳಾ ಮಂಡಳಿಯು ೩೦ ವರುಷದಿಂದ ಜನಪರ ಕೆಲಸ ಮಾಡೋದು ಹೆಮ್ಮೆಯ ವಿಷಯ ಇನ್ನೂ ಮುಂದಿನ ದಿನಗಳಲ್ಲಿ ಒಳ್ಳೆಯ ಕಾರ್ಯಕ್ರಮ ನಡೆಸುವಂತಾಗಲಿ ಎಂದು ತಿಳಿಸಿದರು.

ಪ್ರೌಢ ಶಾಲಾ ಮುಖ್ಯ ಶಿಕ್ಷಕಿ sಡಿ ಲೀಜಾ ಉಪಸ್ಥಿತರಿದ್ದು ಶುಭ ಹಾರೈಸಿದರು.

ಬಳಿಕ ಹಲವಾರು ವರುಷಗಳಿಂದ ಮಹಿಳೆಯರಿಗೆ ಉತ್ತಮವಾಗಿ ಸ್ಕೂಟಿ ತರಬೇತಿ ನೀಡುತ್ತಿರುವ ಅನಿತಾ ಶೆಟ್ಟಿ ಮತ್ತು ಪ್ರಾಂಶುಪಾಲೆ ಎಸ್. ಆರ್. ಸಗಾಯಾ ಇವರನ್ನು ಸನ್ಮಾನಿಸಲಾಯಿತು.
ಅತಿಥಿ ಪ್ರದೀಪ್ ಸುವರ್ಣರನ್ನು ಅಭಿನಂದಿಸಲಾಯಿತು.

ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಮಹಿಳಾ ಮಂಡಳಿಯ ಅಧ್ಯಕ್ಷರಾದ ಯಶೋಧ ಎಸ್ ಶೆಟ್ಟಿಯವರು ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ವೀಣಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರತಿಮಾ ಶೆಟ್ಟಿ ಪ್ರಾರ್ಥಿಸಿದರು. ಸುಲೋಚನ ಧನ್ಯವಾದ ಸಲ್ಲಿಸಿದರು. ವಸಂತಿ ಭಟ್, ಲತಾ ಶೆಟ್ಟಿ ರಾಧಿಕಾ, ಜಯಲಕ್ಷ್ಮಿ ಶೆಟ್ಟಿ ಸಹಕರಿಸಿದರು.

Related posts

ಮುನಿಯಾಲು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಾರ್ಷಿಕೋತ್ಸವ – ಪ್ರತಿಭಾ ಪುರಸ್ಕಾರ

Madhyama Bimba

ಪುರಸಭೆ ವ್ಯಾಪ್ತಿಯಲ್ಲಿ ಅಸಮರ್ಪಕ ಕಸ ವಿಲೇವಾರಿ ತಕ್ಷಣ ಕ್ರಮಕ್ಕೆ ಆಗ್ರಹ : ಶಾಸಕರ ಮೌನಕ್ಕೆ‌ ಆಕ್ರೋಶ ನಮ್ಮೂರಿಗೂ ಒಬ್ಬ ಜನಪರ ಕಾಳಜಿಯ ಶಾಸಕ ಬೇಕಿತ್ತು- ಶುಭದರಾವ್

Madhyama Bimba

ಬಿಜಪಿ ಯುವಮೋರ್ಚಾ ಉಡುಪಿ ಜಿಲ್ಲಾ ಉಪಾಧ್ಯಕ್ಷರಾಗಿ ಗುರುರಾಜ ಮಾಡ ಬೈಲೂರು, ಕಾರ್ಯದರ್ಶಿಯಾಗಿ ರಾಕೇಶ್ ಅಮೀನ್ ಸಾಣೂರು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More