ಕಾರ್ಕಳಹೆಬ್ರಿ

ಹೆಬ್ರಿ ಬಿಜೆಪಿ ಶಕ್ತಿ ಕೇಂದ್ರದಿಂದ ಉನ್ನತ ಶಿಕ್ಷಣ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಹೆಬ್ರಿ: ಮುದ್ರಾಡಿ ಗ್ರಾಮದಲ್ಲಿ ಹುಟ್ಟಿ ಬೆಳೆದು, ಕನ್ನಡ ಮಧ್ಯಮ ಶಾಲೆಗಳಲ್ಲಿ ಕಲಿತು, ಉನ್ನತ ವ್ಯಾಸಂಗ ಮಾಡಿ, ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ, ಇದೀಗ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇಬ್ಬರು ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವು ಹೆಬ್ರಿ ಬಿಜೆಪಿ ಶಕ್ತಿ ಕೇಂದ್ರ ವತಿಯಿಂದ ಮುದ್ರಾಡಿ ಸಮುದಾಯ ಭವನದಲ್ಲಿ ಮಾ 15 ರಂದು ಜರಗಿತು.

ಮಂಗಳೂರು ವಿಶ್ವವಿದ್ಯಾನಿಲಯದಿಂದ ಎಂ ಎ. ಬಿ ಎಡ್ ಪದವಿ ಪಡೆದು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಮುದ್ರಾಡಿಯ ಕೃಷ್ಣ ಶೆಟ್ಟಿಗಾರ್, ಪೂರ್ಣಿಮ ದಂಪತಿಯ ಪ್ರಥಮ ಪುತ್ರಿ ಶಿವಾನಿ, ಹಾಗೂ ಉಪ್ಪಳ ಮಲ್ಲಿಕಾರ್ಜುನ ಗುಲಾಬಿ ದಂಪತಿಗಳ ಮಗಳಾದ ರಮ್ಯರವರು ಎಂ.ಎ. ಬಿಎಡ್‌ನಲ್ಲಿ ಪ್ರಥಮ ಶ್ರೇಣಿಯಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಪದವಿ ಪಡೆದು ಸಾಧನೆ ಮಾಡಿದ ಇವರನ್ನು ಸನ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಮುದ್ರಾಡಿ ಖ್ಯಾತ ವೈದ್ಯರಾದ ಎಂ. ಎಸ್. ರಾವ್ ವಹಿಸಿದ್ದರು.

ಪಕ್ಷದ ಮುಖಂಡರಾದ ಗಣಪತಿ ಎಂ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.

ಶಕ್ತಿ ಕೇಂದ್ರದ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ನಾಯಕ್ ರವರು ಮಾತನಾಡಿ ಕನ್ನಡ ಶಾಲೆಯಲ್ಲಿ ಕಲಿತು ಕಷ್ಟದಲ್ಲೂ ಉನ್ನತ ವ್ಯಾಸಂಗಮಾಡಿ ಛಲ ಒಂದಿದ್ದರೆ ಯಾವುದೇ ಶಿಕ್ಷಣಕ್ಕೆ ಅಡ್ಡಿಯಾಗುವುದ್ದಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಇಲ್ಲಿಯ ತಂಡ ಒಳ್ಳೆಯ ಕೆಲಸ ಮಾಡಿ ಶಿಕ್ಷಣದಲ್ಲಿ ಸಾಧನೆ ಮಾಡಿದ ಇಬ್ಬರನ್ನು ಅಭಿನಂದಿಸುವ ಕಾರ್ಯ ಮಾಡಿದೆ ಎಂದರು.

ಬಿಜೆಪಿ ಮಂಡಲ ಕಾರ್ಯದರ್ಶಿ ಸುರೇಶ್ ಶೆಟ್ಟಿ ಶಿವಪುರ, ಮುದ್ರಾಡಿ ಗ್ರಾಮ ಪಂಚಾಯತ್ ನಿಕಟ ಪೂರ್ವ ಉಪಾಧ್ಯಕ್ಷೆ ರಮ್ಯಕಾಂತಿ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ರಮೇಶ್ ಕುಮಾರ್ ಶಿವಪುರ, ಮುದ್ರಾಡಿ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ವಸಂತಿ ಪೂಜಾರಿ, ನಿಕಟಪೂರ್ವ ಸದಸ್ಯರಾದ ಜಗದೀಶ ಪೂಜಾರಿ ಉಪಸ್ಥಿತರಿದ್ದರು.

ಗಣಪತಿ ಎಂ. ಸ್ವಾಗತಿಸಿ ವಂದಿಸಿದರು. ಮುದ್ರಾಡಿ ಬಿ. ಜೆ. ಪಿ. ಸಮಿತಿ ಪದಾಧಿಕಾರಿಗಳು, ಸದಸ್ಯರು, ನಿಕಟಪೂರ್ವ ಪಂಚಾಯತ್ ಸದಸ್ಯರಾದ ಸಂತೋಷ್ ಕುಮಾರ್ ಶೆಟ್ಟಿ, ಸನತ್ ಕುಮಾರ್, ಪೋಷಕರು ಹಾಜರಿದ್ದರು.

 

Related posts

ಕಾರ್ಕಳ: ಸಾಮಾಜಿಕ ಜಾಲತಾಣದಲ್ಲಿ ಜಾತಿ ಜಾತಿಗಳ ಮಧ್ಯೆ ವೈಷಮ್ಯ ತರುವ ಬರವಣಿಗೆ- ಪ್ರಕರಣ ದಾಖಲು

Madhyama Bimba

ಪ್ರೋತ್ಸಾಹಧನ ಸೌಲಭ್ಯ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Madhyama Bimba

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ಮದ್ಯ ವ್ಯಸನದ ವಿರುದ್ಧ ಜನಜಾಗೃತಿ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More